Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಮಂಗಳವಾರ, 26 ನವೆಂಬರ್ 2019 (08:55 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಅದಕ್ಕಿಂತ ಹೆಚ್ಚಾಗಿ ವಿನಾಕಾರಣ ಮಾನಸಿಕವಾಗಿ ಕೊರಗು ಕಾಡುವುದು. ನಿಮ್ಮ ಕಿಡು ನುಡಿ ಸಂಗಾತಿಯ ಮನಸ್ಸಿಗೆ ಬೇಸರವಾಗಬಹುದು. ಬಾಕಿ ಹಣ ವಸೂಲಿ ಚಿಂತೆ ಕಾಡುವುದು. ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ.

ವೃಷಭ: ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸಬೇಕು. ವೃತ್ತಿರಂಗದಲ್ಲಿ ಮನಸ್ಸಿಗೆ ಹಿಡಿಸದ ಘಟನೆಗಳು ನಡೆಯಲಿವೆ. ಅಂದುಕೊಂಡ ಕಾರ್ಯಗಳು ವಿಳಂಬವಾಗುವ ಸಾಧ್ಯತೆಯಿದೆ. ಹಿತ ಶತ್ರುಗಳಿಂದ ದೂರವಿದ್ದರೆ ಉತ್ತಮ. ಆರೋಗ್ಯದಲ್ಲಿ ಕಾಳಜಿ ವಹಿಸಬೇಕು.

ಮಿಥುನ: ಅನವಶ್ಯಕವಾಗಿ ಬೇರೆಯವರ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿ. ಇದರಿಂದ ಸಂಬಂಧಗಳು ಹಾಳಾಗಬಹುದು. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಕೆಲವು ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಗೊಂದಲಗಳು ಕಾಡಬಹುದು.

ಕರ್ಕಟಕ: ಸಂಗಾತಿಯ ವಿಚಾರದಲ್ಲಿ ಹೆಚ್ಚು ಚಿಂತೆಗೊಳಗಾಗುವಿರಿ. ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಲಿವೆ. ಪ್ರೀತಿ ಪಾತ್ರರ ಸಲಹೆ ಪಡೆಯುವುದು ಉತ್ತಮ. ಕೃಷಿಕರಿಗೆ ವ್ಯವಹಾರದಲ್ಲಿ ಕೊಂಚ ನಷ್ಟವಾಗಬಹುದು. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ.

ಸಿಂಹ: ಕಲೆ, ರಾಜಕೀಯ ಕ್ಷೇತ್ರದಲ್ಲಿರುವವರಿಗೆ ತಮ್ಮ ಕ್ಷೇತ್ರಗಳಲ್ಲಿ ಮುನ್ನಡೆ,  ಉತ್ತಮ ಸ್ಥಾನ ಮಾನ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆಗೆ ಬೆಲೆ ಸಿಗಲಿದೆ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದಿರಬೇಕು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.

 
ಕನ್ಯಾ: ಎಷ್ಟೋ ದಿನದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಅವಿವಾಹಿತರಿಗೆ ವಿವಾಹ ಭಾಗ್ಯ ಶೀ‍ಘ್ರದಲ್ಲೇ ಕೂಡಿಬರುವುದು. ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಧನವಿನಿಯೋಗ ಮಾಡುವಿರಿ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಬಹುದು.

ತುಲಾ: ದೈವಾನುಗ್ರಹದಿಂದ ಇಂದು ನೀವು ಅಂದುಕೊಂಡ ಕೆಲಸಗಳನ್ನು ಸುಗಮವಾಗಿ ನೆರವೇರಿಸುವಿರಿ. ಪ್ರೀತಿ ಪಾತ್ರರ ಭೇಟಿ ಮನಸ್ಸಿಗೆ ಇನ್ನಷ್ಟು ಖುಷಿ ನೀಡಲಿದೆ. ಸ್ವ ವ್ಯಾಪಾರಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ವೃಶ್ಚಿಕ: ಭಾವುಕ ವ್ಯಕ್ತಿತ್ವದವರಿಗೆ ಮಾನಸಿಕವಾಗಿ ಚಿಂತೆ ತಪ್ಪದು. ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕಿದೆ. ವಿಶೇಷ ವ್ಯಕ್ತಿಗಳ ಸಹಕಾರದಿಂದ ಕಾರ್ಯಸಾಧನೆಯಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ದಿನದಂತ್ಯಕ್ಕೆ ಶುಭ ಸುದ್ದಿ.

ಧನು: ಕೆಲಸದ ಒತ್ತಡ ಅನುಭವಕ್ಕೆ ಬರಲಿದೆ. ಎಷ್ಟೇ ಆದಾಯ ಕೈಗೆ ಬಂದರೂ ಅಷ್ಟೇ ಖರ್ಚೂ ಇರುವುದರಿಂದ ಲಾಭದ ಅನುಭವವಾಗಲಾರದು. ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕೆ ಕರೆ ಬರಬಹುದು.

ಮಕರ: ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಆದರೆ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇದೆ. ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಬಹುದು. ಆರೋಗ್ಯದಲ್ಲಿ ಸುಧಾರಣೆಯಿರಲಿದೆ.

ಕುಂಭ: ಕಷ್ಟದ ಸಂದರ್ಭದಲ್ಲಿ ಸಕಾಲದಲ್ಲಿ ಹಣಕಾಸಿನ ಹರಿವು ಇರುವುದರಿಂದ ಹೇಗೋ ನಿಭಾಯಿಸಿಕೊಂಡು ಹೋಗುವಿರಿ. ಕೌಟುಂಬಿಕವಾಗಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಗಾತಿಯ ಮಾತಿಗೆ ಕಿವಿಗೊಡಿ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.

ಮೀನ: ಗೃಹೋಪಯೋಗಿ ವಸ್ತುಗಳು, ಚಿನ್ನಾಭರಣ ಖರೀದಿಗೆ ಹೆಚ್ಚಿನ ಧನವ್ಯಯವಾಗುವುದು. ಹಣಕಾಸಿನ ಮುಗ್ಗಟ್ಟಿನಿಂದ ಇಕ್ಕಟ್ಟಿಗೆ ಸಿಲುಕುವಿರಿ. ಸಾಂಸಾರಿಕವಾಗಿ ಭಿನ್ನಾಭಿಪ್ರಾಯಗಳು ಮೂಡಬಹುದು. ಆದರೆ ಸರಕಾರಿ ಕೆಲಸಗಳಲ್ಲಿ ಜಯ. ದೇವತಾ ಪ್ರಾರ್ಥನೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ನವೆಂಬರ್ 26 ಮಂಗಳವಾರದಂದು ದೇವಿಗೆ ಇದನ್ನು ಅರ್ಪಿಸಿದರೆ ನಿಮ್ಮ ಸಂಕಷ್ಟಗಳು ಪರಿಹಾರವಾಗುವುದು