Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 24 ನವೆಂಬರ್ 2019 (08:58 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಾಂಸಾರಿಕವಾಗಿ ಸಂಗಾತಿಯ ಹೊರೆ ತಪ್ಪಿಸುವ ಕೆಲಸ ಮಾಡಬೇಕಿದೆ. ಗೃಹೋಪಯೋಗಿ ವಸ್ತಗಳ ಖರೀದಿ ಮಾಡುವಿರಿ. ನಿರುದ್ಯೋಗಿಗಳಿಗೆ ಅನಿರೀಕ್ಷಿತವಾಗಿ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರುವುದು. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ನೀವು ಮಾಡುವ ಕೆಲವೊಂದು ಕೆಲಸಗಳಿಗೆ ಬಂಧು ಮಿತ್ರರಿಂದ ಚಾಡಿ ಮಾತು ಕೇಳಿಸಿಕೊಳ್ಳಬೇಕಾಗುತ್ತದೆ. ಆದರೆ ಆತ್ಮಸ್ಥೈರ್ಯದಿಂದ ಮುನ್ನಡೆಯಿರಿ. ಸಂಚಾರದಿಂದ ಕಾರ್ಯಸಿದ್ಧಿಯಾಗಲಿದೆ. ಮನಸ್ಸಿಗೆ ಋಣಾತ್ಮಕ ಚಿಂತನೆಗಳು ಬಾರದಂತೆ ಎಚ್ಚರವಹಿಸಿ.

ಮಿಥುನ: ಅನಿರೀಕ್ಷಿತವಾಗಿ ಅತಿಥಿಗಳ ಆಗಮನದಿಂದ ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಔತಣಕೂಟದಲ್ಲಿ ಭಾಗಿಯಾಗುವಿರಿ. ಉದರ ಸಂಬಂಧೀ ಆರೋಗ್ಯದ ಮೇಲೆ ಕಾಳಜಿಯಿರಲಿ. ಆತ್ಮಗೌರವಕ್ಕೆ ಧಕ್ಕೆಯಾಗುವಂತಹ ಮಾತುಗಳು ಕೇಳಿಬಂದೀತು. ತಾಳ್ಮೆಯಿರಲಿ.

ಕರ್ಕಟಕ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಸಿದ್ಧತೆ ನಡೆಸಲಿದ್ದೀರಿ. ಹಿರಿಯರ ಆರೋಗ್ಯದಲ್ಲಿ ಏರುಪೇರಾದೀತು. ಕಾಳಜಿ ಅಗತ್ಯ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ  ಅಗತ್ಯ.

ಸಿಂಹ: ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸುವಿರಿ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಗಮನ ಹರಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಬರಲಿದೆ. ದೂರದ ನೆಂಟರಿಂದ ಶುಭ ವಾರ್ತೆ ಆಲಿಸಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

 
ಕನ್ಯಾ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ನಿಮಿತ್ತ ವಿದೇಶ ಯಾನದ ಭಾಗ್ಯವಿದೆ. ಯಾವುದೇ ಸಮಸ್ಯೆಗಳನ್ನು ಹಿರಿಯರ ಸಲಹೆ ಪಡೆದು ಪರಿಹರಿಸಲು ಮುಂದಾಗಿ. ಸಂಗಾತಿಯ ಮನದಾಸೆ ಪೂರೈಸುವಿರಿ. ಹಣಕಾಸಿನ ಮುಗ್ಗಟ್ಟುಗಳು ತಲೆದೋರಲಿವೆ.

ತುಲಾ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯವೈಖರಿ ಮೇಲಧಿಕಾರಿಗಳ ಪ್ರಶಂಸೆಗೊಳಗಾಗುವುದು. ಸಾಂಸಾರಿಕವಾಗಿ ಇಂದಿನ ದಿನ ಶುಭವಾಗಿರಲಿದೆ. ಮಕ್ಕಳೊಂದಿಗೆ ಸಂತಸದ ಕ್ಷಣ ಕಳೆಯುವಿರಿ. ಆದರೆ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭ‍್ಯವಾಗಲಿದೆ.

ವೃಶ್ಚಿಕ: ಸಹೋದರರೊಂದಿಗೆ ಆಸ್ತಿ ವಿವಾದಗಳು ತೋರಿಬಂದೀತು. ಹಿರಿಯರ ಮಧ್ಯಸ್ಥಿಕೆಗೆ ಬೆಲೆ ಕೊಡಿ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಬರಲಿದೆ. ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಧನವಿನಿಯೋಗ ಮಾಡುವಿರಿ. ಬಿಡುವಿನ ದಿನದ ಸಂತೋಷ ಅನುಭವಿಸುತ್ತೀರಿ.

ಧನು: ಮನೆಯಲ್ಲಿ ಶುಭ ಮಂಗಲ ಕಾರ್ಯದ ಸಿದ್ಧತೆಗಾಗಿ ಓಡಾಟ ನಡೆಸಬೇಕಾಗುತ್ತದೆ. ದೇಹಾಯಾಸವಾಗದಂತೆ ಎಚ್ಚರವಹಿಸಿ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಮುಖ್ಯ. ಹಣದ ಮೇಲೆ ಅತಿಯಾದ ವ್ಯಾಮೋಹ ಮಾಡಿದರೆ ನಷ್ಟವಾಗುವ ಸಂಭವವೇ ಹೆಚ್ಚು.

ಮಕರ: ಹೊಸ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು, ವಾಹನ ಖರೀದಿ ಮಾಡಲು ಇದುವೇ ಸಕಾಲ. ಆದರೆ ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ. ಮರಳಿ ಬಾರದು. ದುಡುಕಿ ಮಾತನಾಡಲು ಹೋಗಿ ಪ್ರೀತಿ ಪಾತ್ರರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಿ.

ಕುಂಭ: ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿಗಳಿಂದ ಮನಸ್ಸು, ದೇಹ ಹೈರಾಣಾಗುವುದು. ಮಾನಸಿಕವಾಗಿ ನೆಮ್ಮದಿಯಿಲ್ಲದಂತಾದೀತು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಿ. ಕಷ್ಟದ ಸಮಯದಲ್ಲಿ ಮಿತ್ರರ ನೆರವು ದೊರೆಯಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಸಂಗಾತಿಯ ಮನದಿಂಗಿತ ಅರಿತು ನಡೆದರೆ ಸಮಸ್ಯೆಯಾಗದು. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಬೇಕಾಗುತ್ತದೆ. ಹೊಸ ಜನರು, ಸಾಧು ಸಂತರ ಭೇಟಿಯಾಗುವಿರಿ. ಆರ್ಥಿಕವಾಗಿ ಆದಾಯ ಕುಂಠಿತವಾದರೂ ನಷ್ಟವಾಗದು.

Share this Story:

Follow Webdunia kannada

ಮುಂದಿನ ಸುದ್ದಿ

ಹಣ ವಶೀಕರಣ ಮಾಡಲು ಈ ಬೇರಿನಿಂದ ಹೀಗೆ ಮಾಡಿ