Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 25 ನವೆಂಬರ್ 2019 (08:59 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ಧಾರಿಗಳು ನಿಮ್ಮ ಹೆಗಲಿಗೇರಲಿವೆ. ಮೇಲಧಿಕಾರಿಗಳ ವರ್ತನೆ ನಿಮ್ಮ ಅಸಹನೆ ಹೆಚ್ಚಿಸಲಿದೆ. ಹಾಗಿದ್ದರೂ ಎಲ್ಲವನ್ನೂ ಸಹಿಸಿಕೊಂಡು ಹೋಗುವ ತಾಳ್ಮೆ ಬೇಕು. ಸಾಂಸಾರಿಕವಾಗಿಯೂ ಕೊರಗು ಕಾಡಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಆರ್ಥಿಕವಾಗಿ ಹಣಕಾಸಿ ಮುಗ್ಗಟ್ಟುಗಳು ದೂರವಾಗಿ ನಿಧಾನವಾಗಿ ಚೇತರಿಕೆ ಕಂಡುಬರುವುದು. ವ್ಯಾಪಾರ, ವ್ಯವಹಾರಗಳಲ್ಲಿ ಲಾಭ ಗಳಿಸುವಿರಿ. ಆದರೆ ಅಪರಿಚತರಿಂದ ವಂಚನೆಗೊಳಗಾಗುವ ಭೀತಿಯೂ ಇದೆ. ಎಚ್ಚರಿಕೆಯಿಂದಿರಬೇಕು.

ಮಿಥುನ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉನ್ನತ ಸ್ಥಾನ ಮಾನ ಯೋಗವಿದೆ. ಆದರೆ ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರ. ಸಣ್ಣ ತಪ್ಪುಗಳಿಗೆ ದೊಡ್ಡ ಬೆಲೆ ತೆರಬೇಕಾದೀತು. ಕೌಟುಂಬಿಕವಾಗಿ ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು.

ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟಿಸಲು ಅವಕಾಶ ಸಿಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕೆ ಕರೆಬರುವುದು. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

ಸಿಂಹ: ಅವಿವಾಹಿತರ ವಿವಾಹ ಪ್ರಯತ್ನಗಳಿಗೆ ಪರಿಚಯದವರಿಂದಲೇ ಅಡೆತಡೆಗಳು ತೋರಿಬಂದೀತು. ಇಂದು ತಾಳ್ಮೆಯಿಂದಿದ್ದಷ್ಟೂ ಉತ್ತಮ. ಸ್ವ ಉದ್ಯೋಗಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು. ಆರೋಗ್ಯದಲ್ಲಿ ಏರುಪೇರಾಗಬಹುದು. ಕಾಳಜಿಯಿರಲಿ.

 
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ತಯಾರಿ ನಡೆಸುವಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ತುಲಾ: ನೂತನ ದಂಪತಿಗಳಲ್ಲಿ ಹೊಂದಾಣಿಕೆ ಕೊರತೆ ಕಂಡುಬರಬಹುದು. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಹಳೆಯ ಮಿತ್ರರ ಭೇಟಿ ಮನಸ್ಸಿಗೆ ಸಂತಸ ನೀಡುವುದು. ನಾಲಿಗೆ ಚಪಲಕ್ಕೆ ಕಡಿವಾಣ ಹಾಕಿದರೆ ಉತ್ತಮ.

ವೃಶ್ಚಿಕ: ಕಳೆದು ಹೋದ ವಸ್ತುಗಳು, ಸಂಬಂಧಗಳು ಮರಳಿ ಕೈ ಸೇರಲಿವೆ. ಕೌಟುಂಬಿಕವಾಗಿ ಬಂಧು ಮಿತ್ರರ ಆಗಮನದಿಂದ ಸಂತಸವಾಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ. ಹೆಚ್ಚಿನ ಧನಾರ್ಜನೆಗೆ ನಾನಾ ಮಾರ್ಗಗಳನ್ನು ಹುಡುಕುವಿರಿ. ಸಾಲ ಮಾಡಲು ಹೋಗಬೇಡಿ.

ಧನು: ಕೋರ್ಟು ಕಚೇರಿ ವ್ಯವಹಾರಗಳಿಗೆ ಅಲೆದಾಟ ತಪ್ಪದು. ದುಡುಕು, ಮಾತು, ವರ್ತನೆ ಕಾರ್ಯ ಹಾಳು ಮಾಡಬಹುದು. ಸಂಗಾತಿಯ ಮಾತಿಗೆ ಬೆಲೆ ಕೊಡಿ. ವಿದ್ಯಾರ್ಥಿಗಳಿಗೆ ಅಭ‍್ಯಾಸದಲ್ಲಿ ಶ್ರಮವಹಿಸಬೇಕಾಗುತ್ತದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.

ಮಕರ: ಸ್ವ ಉದ್ಯೋಗ, ವ್ಯಾಪಾರ, ವ್ಯವಹಾರ ಮಾಡುವವರಿಗೆ ಮುನ್ನಡೆಯ ಲಾಭವಿದೆ. ಕೃಷಿಕರಿಗೆ ನೀರಿನ ಬವಣೆ ತಪ್ಪಲಿದೆ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಮಕ್ಕಳ ಬಗ್ಗೆ ಅಶುಭ ಸುದ್ದಿಗಳು ಕೇಳಿಬಂದೀತು. ತಾಳ್ಮೆಯಿಂದಿರಿ.

ಕುಂಭ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ಕಾಡಿ ಬಂದೀತು. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಮಹಿಳೆಯರಿಗೆ ಇಷ್ಟ ವಸ್ತು ಖರೀದಿ ಯೋಗವಿದೆ.

ಮೀನ: ದುಡುಕು ಮಾತಿನಿಂದ ಕಿರಿಯರ ಮನಸ್ಸಿಗೆ ನೋವುಂಟು ಮಾಡುವಿರಿ. ಹಿರಿಯರಿಂದ ಬರಬೇಕಾಗಿದ್ದ ಬಳುವಳಿಗಳು ಸಂದಾಯವಾಗಲಿದೆ. ಆಸ್ತಿ ವಿಚಾರದಲ್ಲಿ ದಾಯಾದಿಗಳೊಂದಿಗೆ ಕಿರಿ ಕಿರಿಯಾಗಬಹುದು. ಇಷ್ಟಾರ್ಥ ಸಿದ್ಧಿಗಾಗಿ ಕುಲದೇವರ ಪ್ರಾರ್ಥನೆ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಪೂಜಾ ಮಂದಿರದಲ್ಲಿ ದೇವರ ಫೋಟೋಗಳನ್ನು ಹೀಗೆ ಜೋಡಿಸಿದರೆ ಅದೃಷ್ಟ ಒಲಿಯುತ್ತದೆ