ಬೆಂಗಳೂರು: ಹಲವರಿಗೆ ಬಯಸಿದು ಉದ್ಯೋಗ ಸಿಗುತ್ತಿಲ್ಲ ಎನ್ನುವ ಚಿಂತೆ ಕಾಡುತ್ತದೆ. ಹಾಗಿದ್ದರೆ ಬೇಗನೇ ಉದ್ಯೋಗ ಸಿಗಲು ಯಾವ ದೇವರನ್ನು ಪೂಜಿಸಬೇಕು ನೋಡಿ.
									
			
			 
 			
 
 			
					
			        							
								
																	ಕೆಲವರಿಗೆ ಉದ್ಯೋಗ ಸಿಗಲು ಕಷ್ಟವಾದರೆ ಮತ್ತೆ ಕೆಲವರಿಗೆ ಉದ್ಯೋಗದಲ್ಲಿ ನೆಲೆ ನಿಲ್ಲಲು ಕಷ್ಟವಾಗುತ್ತದೆ. ಕೆಲವರು ಆಗಾಗ್ಗೆ ಉದ್ಯೋಗ ಬದಲಾವಣೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೆಲ್ಲವೂ ನಮ್ಮ ಭವಿಷ್ಯವನ್ನು ಮುಸುಕಾಗಿಸುತ್ತದೆ. ಹಾಗಿದ್ದರೆ ಜ್ಯೋತಿಷ್ಯ ಪ್ರಕಾರ ಯಾವ ದೇವರನ್ನು ನಂಬಿದರೆ ಬೇಗನೇ ಉದ್ಯೋಗ ಸಿಗುತ್ತದೆ?
									
										
								
																	ಉದ್ಯೋಗದಲ್ಲಿ ತೃಪ್ತಿ ಇಲ್ಲದೇ ಇದ್ದಾಗ, ಉದ್ಯೋಗ ಬದಲಾವಣೆಗೆ ಪ್ರಯತ್ನಿಸುವಾಗ, ಉದ್ಯೋಗದಲ್ಲಿ ತೊಂದರೆ ಉಂಟಾದಾಗ ಶನಿ ದೇವರನ್ನು ಪ್ರಾರ್ಥನೆ ಮಾಡಿದರೆ ಉತ್ತಮ. ಶನೀಶ್ವರನಿಗೆ ಪೂಜೆ ಅಥವಾ ಆಂಜನೇಯ ಸ್ವಾಮಿಯ ಸೇವೆ ಮಾಡಿದಲ್ಲಿ ಉದ್ಯೋಗದಲ್ಲಿ ಸ್ಥಿರತೆ ಉಂಟಾಗುತ್ತದೆ.
									
											
							                     
							
							
			        							
								
																	ಇನ್ನು ಉದ್ಯೋಗವೇ ಸಿಗದೇ ಪರದಾಡುತ್ತಿರುವವರು ಅಥವಾ ತಮ್ಮ ಕ್ವಾಲಿಫಿಕೇಶನ್ ಗೆ ತಕ್ಕಂತೆ ಕೆಲಸ ಸಿಗದೇ ಪರದಾಡುತ್ತಿರುವವರು ಶನಿಯ ಜೊತೆಗೆ ಭೈರವನ ಪೂಜೆ ಮಾಡಿದರೆ ಉತ್ತಮ. ಭೈರವ ಆರಾಧನೆಯಿಂದ ವೃತ್ತಿಗೆ ಸಂಬಂಧಿತ ತೊಡಕುಗಳು ನಿವಾರಣೆಯಾಗುತ್ತದೆ.