Select Your Language

Notifications

webdunia
webdunia
webdunia
webdunia

ಈ ರಾಶಿಯವರು ಸಾಹಸಪ್ರಿಯರಾಗಿರುತ್ತಾರೆ

Astrology

Krishnaveni K

ಬೆಂಗಳೂರು , ಭಾನುವಾರ, 24 ಮಾರ್ಚ್ 2024 (09:24 IST)
ಬೆಂಗಳೂರು: ಎಲ್ಲಾ ರಾಶಿಯವರ ಗುಣಸ್ವಭಾವಗಳು ಒಂದೇ ರೀತಿಯಿರುವುದಿಲ್ಲ. ಕೆಲವರು ಜೀವನದಲ್ಲಿ ಅತ್ಯಂತ ಧೈರ್ಯಶಾಲಿಗಳು, ಸಾಹಸಪ್ರಿಯರೂ ಆಗಿರುತ್ತಾರೆ.

ಜೀವನದಲ್ಲಿ ಸದಾ ಹೊಸ ಸವಾಲು ಎದುರಿಸುವ, ಸಾಹಸಕ್ಕೆ ಕೈ ಹಾಕುವ ಕೆಲವೊಂದು ರಾಶಿಗಳಿವೆ. ಇವರಿಗೆ ಜೀವನದಲ್ಲಿ ರೋಚಕತೆ, ಸಾಹಸವಿದ್ದರೇ ಜೀವನ ಇಂಟ್ರೆಸ್ಟಿಂಗ್ ಎನಿಸುವುದು. ಹಾಗಿದ್ದರೆ ಜೀವನದಲ್ಲಿ ಸಾಹಸ ಪ್ರಿಯರಾದ ಆರು ರಾಶಿಗಳು ಯಾವುವು ನೋಡೋಣ.

ಮೇಷ ರಾಶಿ: ಧೈರ್ಯ, ಹುಂಬುತನಕ್ಕೆ ಮೇಷ ರಾಶಿಯವರು ಸದಾ ಮುಂದು. ಮುನ್ನುಗ್ಗಿ ಹೊಸದನ್ನು ಮಾಡುವ ಉತ್ಸಾಹವಂತರು. ಇವರು ಸಾಹಸವೆಂದರೆ ಇಷ್ಟಪಡುತ್ತಾರೆ.
ಧನು ರಾಶಿ: ಈ ರಾಶಿಯವರು ಜೀವನದಲ್ಲಿ ಹೊಸದನ್ನು ಕಲಿಯಲು, ಸಾಹಸವನ್ನು ಮಾಡಲು ಸದಾ ತುಡಿಯುತ್ತಿರುತ್ತಾರೆ. ತಮ್ಮ ಗುರಿ ಸಾಧನೆಗಾಗಿ ತುಂಬಾ ದೂರ ಪ್ರಯಾಣ ಮಾಡಲೂ ಸಿದ್ಧರಿರುತ್ತಾರೆ.
ಮಿಥುನ ರಾಶಿ: ಎಲ್ಲವನ್ನೂ ಕುತೂಹಲದಿಂದ ನೋಡುವ ಸ್ವಭಾವದವರು. ಇವರ ಕುತೂಹಲ ಅಷ್ಟಕ್ಕೇ ಮುಗಿಯುವುದಿಲ್ಲ. ಅದು ಎಷ್ಟೇ ಅಪಾಯಕಾರಿಯಾದರೂ ಪ್ರಯೋಗ ಮಾಡಿ ನೋಡುವ ಸಾಹಸವಂತರಾಗಿರುತ್ತಾರೆ.
ಕುಂಭ ರಾಶಿ:  ಈ ರಾಶಿಯವರು ತಮ್ಮದೇ ಶೈಲಿಯಲ್ಲಿ ಜೀವನ ಮಾಡಲು ಬಯಸುತ್ತಾರೆ. ಅದಕ್ಕಾಗಿ ಅವರು ಎಂತಹದ್ದೇ ಅಪಾಯವನ್ನು ಎದುರು ಹಾಕಿಕೊಳ್ಳಲೂ ಸಿದ್ಧರಿರುತ್ತಾರೆ.
ಸಿಂಹ ರಾಶಿ: ಈ ರಾಶಿಯವರು ಸ್ವಭಾವತಃ ನಾಯಕತ್ವ ಗುಣವಿರುವವರು. ನೈಸರ್ಗಿಕ ಸಾಹಸಿಗಳು, ಹೊಸ ಕೆಲಸಗಳನ್ನು ಮಾಡಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ.
ಮೀನ ರಾಶಿ: ಈ ರಾಶಿಯವರು ಸೃಜನಶೀಲರು, ಸಾಹಸಿಗಳು. ಜೀವನದಲ್ಲಿ ಹೊಸ ಅನುಭವವನ್ನು ಅನ್ವೇಷಿಸುತ್ತಾ ಸಾಗುತ್ತಾರೆ. ಸಾಹಸಕ್ಕಾಗಿ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?