Select Your Language

Notifications

webdunia
webdunia
webdunia
webdunia

ಹೋಳಿ ಹಬ್ಬಕ್ಕೆ ಯಾವ ರಾಶಿಯವರು ಯಾವ ಬಣ್ಣ ಹಚ್ಚಬೇಕು ನೋಡಿ

Holi festival

Krishnaveni K

ಬೆಂಗಳೂರು , ಸೋಮವಾರ, 25 ಮಾರ್ಚ್ 2024 (11:33 IST)
ಬೆಂಗಳೂರು: ಇಂದು ದೇಶದಾದ್ಯಂತ ಬಣ್ಣದ ಹಬ್ಬ ಹೋಳಿ ಆಚರಿಸಲಾಗುತ್ತಿದೆ. ಹೋಳಿ ಹಬ್ಬದಂದು ಬಣ್ಣದ ಓಕುಳಿ ಎರಚಿ ಸಂಭ್ರಮಾಚರಿಸುವುದು ವಾಡಿಕೆ. ಆದರೆ ನಿಮ್ಮ ರಾಶಿಗೆ ಅನುಗುಣವಾಗಿ ಯಾವ ಬಣ್ಣ ಶುಭದಾಯಕ ಎಂದು ನೋಡಿ.

ಮೇಷ: ಈ ರಾಶಿಯವರು ಗುಲಾಬಿ ಬಣ್ಣದೊಂದಿಗೆ ಹೋಳಿ ಆಚರಿಸುವುದದರಿಂದ ಆಯುಷ್ಯ, ಆರೋಗ್ಯ ವೃದ್ಧಿಯಾಗುತ್ತದೆ
ವೃಷಭ: ಈ ರಾಶಿಯವರು ಬಿಳಿ ಬಣ್ಣದ ಬಟ್ಟೆ ಧರಿಸಿ ಹಳದಿ ಬಣ್ಣದಲ್ಲಿ ಹೋಳಿ ಆಚರಿಸಿದರೆ ಸುಖ, ಶಾಂತಿ, ನೆಮ್ಮದಿ ಇರುತ್ತದೆ.
ಮಿಥುನ: ಈ ರಾಶಿಯವರು ಹಸಿರು ಬಣ್ಣದ ಓಕುಳಿಯಾಡಿದರೆ ಮನೆಯಲ್ಲಿ ನೆಮ್ಮದಿ, ಐಶ್ವರ್ಯಾಭಿವೃದ್ಧಿಯಾಗುವುದು ಖಚಿತ
ಕರ್ಕಟಕ: ಚಂದ್ರ ಅಧಿಪತಿಯಾಗಿರುವ ಈ ರಾಶಿಯವರು ಬಿಳಿ ಬಣ್ಣ ಅಥವಾ ಗುಲಾಬಿ ಬಣ್ಣವನ್ನು ಬಳಸಿ ಓಕುಳಿಯಾಡಬೇಕು.
ಸಿಂಹ: ಈ ರಾಶಿಯವರು ಕೆಂಪು ಬಣ್ಣದಲ್ಲಿ ಹೋಳಿ ಆಚರಿಸಿದರೆ ಧನ, ಕನಕದ ಜೊತೆಗೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ
ಕನ್ಯಾ: ಇವರು ಹಸಿರು ಬಣ್ಣದಲ್ಲಿ ಹೋಳಿ ಆಚರಿಸುವುದರಿಂದ ಬುದ್ಧಿವಂತರಾಗುವುದಲ್ಲದೆ, ವ್ಯವಹಾರದಲ್ಲಿ ಲಾಭ ಗಳಿಸುತ್ತಾರೆ.
ತುಲಾ: ಈ ರಾಶಿಯವರು ತಿಳಿ ಹಳದಿ ಅಥವಾ ಬಿಳಿ ಬಣ್ಣದ ಹೋಳಿ ಆಚರಿಸಿದರೆ ಎಲ್ಲಾ ರೀತಿಯ ಸುಖ, ಸೌಕರ್ಯ ಪಡೆಯಬಹುದು
ವೃಶ‍್ಚಿಕ:  ಈ ರಾಶಿಯವರು ಕುಂಕುಮ ಬಣ್ಣದಿಂದ ಹೋಳಿ ಆಚರಿಸಿದರೆ ಅಪಜಯ, ಅಪವಾದದ ಭೀತಿ ದೂರವಾಗುತ್ತದೆ.
ಧನು: ಹಳದಿ ಬಣ್ಣದಲ್ಲಿ ಹೋಳಿ ಆಚರಿಸುವುದರಿಂದ ಇವರಿಗೆ ಜೀವನದಲ್ಲಿ ಸಂಪತ್ತು ಮತ್ತು ಆರೋಗ್ಯ ವೃದ್ಧಿಯಾಗುತ್ತದೆ
ಮಕರ:  ನೀಲಿ ಬಣ್ಣದಿಂದ ಹೋಳಿ ಓಕುಳಿಯಾಡುವುದರಿಂದ ಶನಿಯ ಕಾಟದಿಂದ ಮುಕ್ತಿ ಸಿಗುವುದು.
ಕುಂಭ: ಹಸಿರು ಬಣ್ಣದಲ್ಲಿ ಹೋಳಿ ಆಚರಿಸುವುದಿಂದ ವ್ಯಾಪಾರ, ವ್ಯವಹಾರದಲ್ಲಿನ ನಷ್ಟ ಭೀತಿ ದೂರವಾಗುವುದು
ಮೀನ:  ಹಳದಿ ಬಣ್ಣದಲ್ಲಿ ಹೋಳಿ ಆಚರಿಸುವುದರಿಂದ ಸಂಪತ್ತು ವೃದ್ಧಿಯಾಗುವುದಲ್ಲದೆ, ಆರೋಗ್ಯವೂ ಉತ್ತಮವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?