Select Your Language

Notifications

webdunia
webdunia
webdunia
webdunia

ಕಪಾಟು ಮತ್ತು ಪರ್ಸ್ ಎರಡನ್ನೂ ಖಾಲಿ ಇಟ್ಟುಕೊಳ್ಳಬೇಡಿ

Purse

Krishnaveni K

ಬೆಂಗಳೂರು , ಮಂಗಳವಾರ, 19 ಮಾರ್ಚ್ 2024 (09:07 IST)
Photo Courtesy: Twitter
ಬೆಂಗಳೂರು: ನಿಮ್ಮ ಪರ್ಸ್ ಇರಲಿ, ಕಪಾಟಿರಲಿ ಯಾವತ್ತೂ ಖಾಲಿ ಇಟ್ಟುಕೊಳ್ಳಬೇಡಿ. ಇದರಿಂದ ನೀವು ಲಕ್ಷ್ಮೀ ದೇವಿಯ ಅವಕೃಪೆಗೆ ಒಳಗಾಗಲಿದ್ದೀರಿ.

ಪ್ರತಿಯೊಬ್ಬರೂ ಹೊರಗೆ ಹೋಗುವಾಗ ಪರ್ಸ್ ಜೊತೆಯಲ್ಲೇ ಕೊಂಡೊಯ್ಯತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪರ್ಸ್ ಇಲ್ಲದೇ ಮೊಬೈಲ್ ಮೂಲಕವೇ ವ್ಯವಹಾರ ಮುಗಿಸಲಾಗುತ್ತದೆ. ಆದರೆ ಹೊರಗೆ ಹೋಗುವಾಗ ತಪ್ಪದೇ ಪರ್ಸ್ ಕೈಯಲ್ಲಿಟ್ಟುಕೊಂಡು ಹೋಗಿ. ಇದಕ್ಕೆ ಕಾರಣವೂ ಇದೆ.

ಕೇವಲ ಪರ್ಸ್ ಮಾತ್ರವಲ್ಲ. ಪರ್ಸ್ ಜೊತೆಯಲ್ಲಿದ್ದು ಅದು ಖಾಲಿಯಾಗಿದ್ದರೂ ಪ್ರಯೋಜನವಾಗದು. ಪರ್ಸ್ ಒಳಗೆ ಸ್ವಲ್ಪ ಕಾಯಿನ್ ಅಥವಾ ನೋಟುಗಳಾದರೂ ಇಟ್ಟುಕೊಂಡಿರಲೇ ಬೇಕು. ಪರ್ಸ್ ಖಾಲಿಯಾಗಿದ್ದರೆ ಲಕ್ಷ್ಮೀ ದೇವಿ ನಿಮಗೆ ಒಲಿಯಲಾರಳು.

ಲಕ್ಷ್ಮೀ ದೇವಿ ನಿಮಗೆ ಒಲಿದು ಸದಾ ಹಣಕಾಸಿನ ವಿಚಾರದಲ್ಲಿ ಉನ್ನತಿ ಪಡೆಯಬೇಕಾದರೆ ಖಾಲಿ ಪರ್ಸ್ ಇಟ್ಟುಕೊಳ್ಳಲೇಬೇಡಿ. ಅದೇ ರೀತಿ ಕಪಾಟನ್ನು ಖಾಲಿ ಮಾಡುವಾಗಲೂ ಅದೇ ರೀತಿ ಖಾಲಿ ಬಿಡಬಾರದು. ಕನಿಷ್ಠ ಒಂದು ಕಾಯಿನ್ ಆದರೂ ಇಟ್ಟು ಕಪಾಟು ಖಾಲಿ ಮಾಡಿ. ಇದರಿಂದ ದಾರಿದ್ರ್ಯ ಬಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?