Select Your Language

Notifications

webdunia
webdunia
webdunia
webdunia

ಅವಿವಾಹಿತ ಮಹಿಳೆಯರು ಮದುವೆಗೆ ಮೊದಲು ಈ ತಪ್ಪು ಮಾಡಲೇಬೇಡಿ

ಅವಿವಾಹಿತ ಮಹಿಳೆಯರು ಮದುವೆಗೆ ಮೊದಲು ಈ ತಪ್ಪು ಮಾಡಲೇಬೇಡಿ

Krishnaveni K

ಬೆಂಗಳೂರು , ಗುರುವಾರ, 28 ಮಾರ್ಚ್ 2024 (11:11 IST)
ಬೆಂಗಳೂರು: ಜೀವನದಲ್ಲಿ ಉತ್ತಮ ಸಂಗಾತಿಯನ್ನು ಪಡೆದು ಬೇಗನೇ ಮದುವೆಯಾಗಿ ಸೆಟಲ್ ಆಗಬೇಕು ಎಂದು ಬಯಸುವ ಮಹಿಳೆಯರು ಅಪ್ಪಿತಪ್ಪಿಯೂ ಕೆಲವೊಂದು ಕೆಲಸಗಳನ್ನು ಮಾಡಬಾರದು.

ಅವಿವಾಹಿತ ಕನ್ಯಾಮಣಿಗಳಿಗೆ ಮದುವೆಯಾಗಲು ಜ್ಯೋತಿಷ್ಯ ಪ್ರಕಾರ ಕೆಲವೊಂದು ಸಂಪ್ರದಾಯ ಪಾಲಿಸಬೇಕಾಗುತ್ತದೆ. ಕೆಲವೊಂದು ವಿಚಾರಗಳನ್ನು ತಪ್ಪಿಯೂ ಮಾಡದೇ ಇದ್ದರೆ ಉತ್ತಮ. ಯಾಕೆಂದರೆ ಮದುವೆ, ಸಂಬಂಧ ಎನ್ನುವುದು ಒಂದು ಪೂರ್ವನಿಶ್ಚಿತ ಯೋಗ.

ಕಾಲುಂಗರ ಹಾಕಬೇಡಿ: ಮದುವೆಯಾಗದ ಹೆಣ್ಣುಮಕ್ಕಳು ಅಲಂಕಾರಕ್ಕಾಗಿ ಕಾಲುಂಗರ ಹಾಕಿಕೊಂಡು ತಿರುಗಾಡಬೇಡಿ. ಯಾಕೆಂದರೆ ಕಾಲುಂಗರಕ್ಕೆ ಅದರದ್ದೇ ಆದ ಮಹತ್ವವಿದೆ. ಇದನ್ನು ಅಲಂಕಾರದಂತೆ ಧರಿಸಿದರೆ ಮದುವೆಗೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು.

ತಾಳಿ ಸರ: ಕಾಲುಂಗರದಂತೇ ತಾಳಿಸರವೂ ಸುಮಂಗಲಿಯ ಲಕ್ಷಣವಾಗಿದೆ. ಇದರ ವಿಚಾರದಲ್ಲೂ ಹುಡುಗಾಟವಾಡಬಾರದು. ಅಲಂಕಾರಕ್ಕಾಗಿ ತಾಳಿ ಸರವನ್ನು ಹಾಕಿಕೊಂಡು ತಿರುಗಾಡಿದರೆ ವಿವಾಹ ಸಂಬಂಧಿತ ಅಡಚಣೆಗಳು ಉಂಟಾಗುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?