Select Your Language

Notifications

webdunia
webdunia
webdunia
webdunia

ವಾಹನಕ್ಕೆ ಆಯುಧ ಪೂಜೆ ಮಾಡುವಾಗ ಯಾವ ಮಂತ್ರ ಹೇಳಬೇಕು

Durga Godess

Krishnaveni K

ಬೆಂಗಳೂರು , ಮಂಗಳವಾರ, 30 ಸೆಪ್ಟಂಬರ್ 2025 (08:40 IST)
Photo Credit: AI Image
ಇನ್ನೇನು ದಸರಾ ಆಯುಧ ಪೂಜೆ ಸಂಭ್ರಮ. ಮನೆಯಲ್ಲಿರುವ ವಾಹನಗಳಿಗೆ ಪೂಜೆ ಮಾಡುವುದು ಪದ್ಧತಿ. ವಾಹನಗಳಿಗೆ ಪೂಜೆ ಮಾಡುವಾಗ ಯಾವ ಮಂತ್ರ ಹೇಳಬೇಕು ಇಲ್ಲಿದೆ ವಿಧಾನ.

ಪ್ರತಿನಿತ್ಯ ನಾವು ಓಡಾಡುವ ವಾಹನಗಳಿಗೆ ದೃಷ್ಟಿ ತೆಗೆದು, ಯಾವುದೇ ಅಡೆತಡೆಗಳು, ತೊಂದರೆಗಳು ಬಾರದಂತೆ ಪೂಜೆ ಮಾಡುವುದು ವಾಡಿಕೆ. ಅಪಘಾತ ಭಯ, ವಾಹನಗಳಿಂದಾಗಿ ಬರುವ ಸಮಸ್ಯೆಗಳು ಇದರಿಂದ ನಿವಾರಣೆಯಾಗುತ್ತದೆ ಎಂದು ನಂಬಿಕೆ.

ಇದಕ್ಕಾಗಿ ಮೊದಲು ವಾಹನಗಳನ್ನು ತೊಳೆದು ಶುಭ್ರ ಮಾಡಿಕೊಳ್ಳಬೇಕು. ಬಳಿಕ ಗಂಧ, ಅರಿಶಿನ ಕುಂಕುಮವನ್ನು ಹಚ್ಚಬೇಕು. ಗಾಡಿಯ ನಾಲ್ಕೂ ಚಕ್ರಗಳಿಗೆ ನಿಂಬೆ ಹಣ್ಣುಗಳನ್ನಿಡಬೇಕು. ವಾಹನಕ್ಕೆ ಎದುರು ಭಾಗದಲ್ಲಿ ಹೂವಿನ ಮಾಲೆ ಹಾಕಿ ಓಂ ಸ್ವಸ್ತಿ ಎಂದು ಗಂಧ ಅಥವಾ ಅರಿಶಿನ ಕುಂಕುಮದಲ್ಲಿ ಬರೆಯಬೇಕು.

ಬಳಿಕ ಒಂದು ತೆಂಗಿನ ಕಾಯಿ ಹಿಡಿದುಕೊಂಡು ವಾಹನಕ್ಕೆ ಒಂದು ಸುತ್ತು ಬಂದು ಎದುರು ಭಾಗದಿಂದ ತೆಂಗಿನ ಕಾಯಿ ಒಡೆಯಬೇಕು. ಒಡೆಯುವಾಗ ಸ್ವಲ್ಪ ನೀರು ಉಳಿಸಿಕೊಂಡು ಈ ನೀರನ್ನು ವಾಹನದ ನಾಲ್ಕೂ ಚಕ್ರದ ಬಳಿ ಚಿಮುಕಿಸಬೇಕು. ಈಗ ಅಗರಬತ್ತಿಯಿಂದ ಆರತಿ ಮಾಡಬೇಕು.

ಈ ರೀತಿ ಪೂಜೆ ಮಾಡುವಾಗ ತಪ್ಪದೇ ಈ ಕೆಳಗಿನ ಮಂತ್ರವನ್ನು ಪಠಿಸಿ:
ವಿವಾದೇ ವಿಷಾದೇ ಪ್ರಮಾದೇ ಪ್ರವಾಸೇ
ಜಲೇ ಚಾನಲೇ ಶತ್ರು ಮಾಧಯೇ,
ಅರಣ್ಯೇ ಶರಣ್ಯೇ ಸದಾ ಮಾಂ ಪಾಹಿ
ಗತಿಸ್ತವೂಂ ಗತಿಸ್ತವೂಂ ತ್ವಮೇಕಾ ಭವಾನಿ

Share this Story:

Follow Webdunia kannada

ಮುಂದಿನ ಸುದ್ದಿ

ದುರ್ಗಾಷ್ಟಮಿ ದಿನವಾದ ಇಂದು ತಪ್ಪದೇ ಓದಬೇಕಾದ ಮಂತ್ರ