Select Your Language

Notifications

webdunia
webdunia
webdunia
webdunia

ನವರಾತ್ರಿ ಮೂರನೇ ದಿನ ಆರಾಧಿಸುವ ಚಂದ್ರಘಂಟಾ ದೇವಿ ಎಷ್ಟು ಪವರ್ ಫುಲ್ ಗೊತ್ತಾ

Chandraghanta devi

Krishnaveni K

ಬೆಂಗಳೂರು , ಶನಿವಾರ, 5 ಅಕ್ಟೋಬರ್ 2024 (08:46 IST)
Photo Credit: X
ಬೆಂಗಳೂರು: ನವರಾತ್ರಿಯ ಮೂರನೇ ದಿನವಾದ ಇಂದು ಚಂದ್ರಘಂಟಾ ದೇವಿಯ ಆರಾಧನೆ ಮಾಡಲಾಗುತ್ತದೆ. ಈ ದೇವಿ ಎಷ್ಟು ಪವರ್ ಫುಲ್ ಎಂದು ತಿಳಿಯಬೇಕಾದರೆ ಇಲ್ಲಿ ಓದಿ.

ಚಂದ್ರಘಂಟಾ ದೇವಿ ಧೈರ್ಯ ಮತ್ತು ಶೌರ್ಯದ ಸಂಕೇತ. ಆಕೆ ಕೈಯಲ್ಲಿ ಆಯುಧ ಹಿಡಿದು ತೋಳದ ಮೇಲೆ ಸಂಚಾರ ಮಾಡುವ ಭಂಗಿಯಲ್ಲಿರುತ್ತಾಳೆ. ಆದರೆ ಕೈಯಲ್ಲಿ ಅಷ್ಟೊಂದು ಆಭರಣಗಳಿದ್ದರೂ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಆಕೆ ವಾತ್ಸಲ್ಯಮಯಿಯಾಗಿರುತ್ತಾಳೆ.

ಚಂದ್ರಘಂಟಾ ದೇವಿಯ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಚಂದ್ರಘಂಟಾ ದೇವಿಯ ಮಂತ್ರ ಹೀಗಿದೆ:
ಓಂ ದೇವಿ ಚಂದ್ರಘಂಟಾಯೈ ನಮಃ
ಪ್ರವರರೂಢಾ ಚಂಡಕೋಪಾಸ್ತಕಾಯೇರ್ಯುತಪ್ರಸಾದಂ
ತನುತೇ ಮಾಹ್ಯಂ ಚಂದ್ರಘಂಟೋತಿ ವಿಶ್ರುತಾ

ನವರಾತ್ರಿಯ ಮೂರನೇ ದಿನ ಮುಂಜಾನೆ ಎದ್ದು ದೇವಿಗೆ ಒಣ ಹಣ್ಣು, ಹಾಲಿನಿಂದ ಮಾಡಿದ ವಸ್ತುಗಳಿಂದ ನೈವೇದ್ಯ ಮಾಡಿ ಈ ಮಂತ್ರವನ್ನು ಪಠಿಸುತ್ತಾ ಪೂಜಿಸಿದರೆ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಶತ್ರು ಭಯ ನಾಶ, ಸೋಲಿನ ಭಯ ನಾಶವಾಗುವುದು. ಅಲ್ಲದೆ ಸಕಲ ರೋಗ ಭಯಗಳಿಂದಲೂ ಮುಕ್ತಾಗುವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?