Select Your Language

Notifications

webdunia
webdunia
webdunia
webdunia

ನವರಾತ್ರಿಯ ಮೊದಲ ದಿನ ಇಂದು ಯಾವ ದೇವಿಯ ಹೇಗೆ ಪೂಜಿಸಬೇಕು ಇಲ್ಲಿದೆ ವಿವರ

Shailaputri Godess

Krishnaveni K

ಬೆಂಗಳೂರು , ಗುರುವಾರ, 3 ಅಕ್ಟೋಬರ್ 2024 (08:38 IST)
Photo Credit: X
ಬೆಂಗಳೂರು: ಇಂದಿನಿಂದ ಒಂಭತ್ತು ದಿನಗಳ ನವರಾತ್ರಿಯ ವೈಭವ ಶುರು. ಇಂದು ನವರತ್ರಿಯ ಮೊದಲ ದಿನವಾಗಿದ್ದು ದೇವಿಯನ್ನು ಶೈಲಪುತ್ರಿಯ ರೂಪದಲ್ಲಿ ಆರಾಧಿಸುತ್ತೇವೆ. ಈ ದೇವಿಯ ವಿಶೇಷತೆಯೇನು ಹೇಗೆ ಪೂಜಿಸಬೇಕು ಇಲ್ಲಿದೆ ವಿವರ.

ದೇವಿಯ ಒಂಭತ್ತು ರೂಪಗಳಲ್ಲಿ ಮೊದಲನೆಯ ರೂಪ ಶೈಲಪುತ್ರಿ. ಶೈಲ ಪುತ್ರಿ ಎಂದರೆ ಪರ್ವತ ಪುತ್ರಿ ಎಂದರ್ಥ. ಈ ದೇವಿಯು ಚಂದ್ರನ ಅಧಿಪತಿಯಾಗಿದ್ದು, ಧೈರ್ಯ ಮತ್ತು ಬಲದ ಸಂಕೇತವಾಗಿದೆ. ಬಲಕೈಯಲ್ಲಿ ತ್ರಿಶೂಲ ಎಡಕೈಯಲ್ಲಿ ಕಮಲದ ಹೂ ಹಿಡಿದು ಬಸವನ ಮೇಲೆ ಕುಳಿತ ಭಂಗಿಯಲ್ಲಿ ಈ ದೇವಿಯನ್ನು ಕಾಣಬಹುದು.
ಶೈಲಪುತ್ರಿ ದೇವಿಯ ಪೂಜೆ ಮಂತ್ರ ಹೀಗಿದೆ:
ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಂ
ವೃಷಾರೂಢಾಂ ಶೂಲಧರಂ ಶೈಲಪುತ್ರೀಂ ಯಶಸ್ವಿನೀಂ

ಇಂದು ಈ ಮಂತ್ರವನ್ನು 108 ಬಾರಿ ಪಠಿಸುತ್ತಾ ದೇವಿಯ ಆರಾಧನೆ ಮಾಡುವುದರಿಂದ ನಿಮಗೆ ಒಳಿತಾಗುತ್ತದೆ. ಇಂದು ತಪ್ಪದೇ ಶೈಲಪುತ್ರಿ ದೇವಿಗೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಿ. ತಾಯಿಗೆ ಹೂವಿನಿಂದ ಅರ್ಚನೆ ಮಾಡಿ ನೈವೇದ್ಯ ಮಾಡಿದರೆ ನಿಮಗೆ ಶೈಲಪುತ್ರಿ ದೇವಿಯ ಅನುಗ್ರಹ ಸಿಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?