Select Your Language

Notifications

webdunia
webdunia
webdunia
webdunia

ನವರಾತ್ರಿ ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಯಾಕೆ ಆರಾಧಿಸಬೇಕು

Astrology

Krishnaveni K

ಬೆಂಗಳೂರು , ಭಾನುವಾರ, 6 ಅಕ್ಟೋಬರ್ 2024 (09:14 IST)
Photo Credit: X
ಬೆಂಗಳೂರು: ಇಂದು ನವರಾತ್ರಿಯ ನಾಲ್ಕನೇ ದಿನವಾಗಿದ್ದು, ದುರ್ಗಾದೇವಿಯನ್ನು ಕೂಷ್ಮಾಂಡ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಕೂಷ್ಮಾಂಡ ದೇವಿಯನ್ನು ಯಾಕೆ ಪೂಜಿಸಬೇಕು, ಯಾವ ಮಂತ್ರ ಹೇಳಬೇಕು ಇಲ್ಲಿದೆ ವಿವರ.

ದುರ್ಗೆಯ ನಾಲ್ಕನೇ ರೂಪ ಕೂಷ್ಮಾಂಡ ದೇವಿ. ಕೂಷ್ಮಾಂಡ ದೇವಿಯ ಮುಖದಲ್ಲಿ ತಾಯಿ ಕಳೆ ಎದ್ದು ಕಾಣುತ್ತದೆ. ಆಕೆಯನ್ನು ಪೂಜೆ ಮಾಡುವುದರಿಂದ ಮಾನಸಿಕವಾಗಿ ಅತೀವ ಸಂತೋಷ ಉಂಟುಮಾಡುತ್ತದೆ. ಕೈಯಲ್ಲಿ ಬಿಲ್ಲು ಬಾಣ, ಮಕರಂದ ತುಂಬಿದ ಮಡಕೆ, ಕಮಲದ ಹೂ, ಚಕ್ರ, ಗದೆ ಎಲ್ಲವನ್ನೂ ಹಿಡಿದಿದ್ದರೂ ತಾಯಿ ಅತ್ಯಂತ ಪ್ರಸನ್ನವದನಳಾಗಿರುತ್ತಾಳೆ.

ಶಾಸ್ತ್ರಗಳ ಪ್ರಕಾರ ಕೂಷ್ಮಾಂಡ ದೇವಿ ಹಸಿರು ಬಣ್ಣವನ್ನು ಇಷ್ಟಪಡುತ್ತಾಳೆ. ಹೀಗಾಗಿ ಇಂದು ಹಸಿರು ವಸ್ತ್ರ ಧರಿಸಿ ದೇವಿಯ ಪೂಜೆ ಮಾಡಬೇಕು. ಅಲ್ಲದೆ ಇಂದು ಹಸಿರು ವರ್ಣದ ಬಟ್ಟೆ ತೊಡುವುದು ಮಂಗಳಕರವೆಂದು ನಂಬಲಾಗಿದೆ. ಸಿಂಹದ ಸವಾರಿ ಮಾಡುವ ಈಕೆ ಶಕ್ತಿಯ ಸಂಕೇತವಾಗಿದ್ದಾಳೆ.

ಯಾ ದೇವಿ ಸರ್ವಭೂತೇಷು ಮಾ ಕೂಷ್ಮಾಂಡ ಸಂಸ್ಥಿತಾ
ನಮಸ್ತೈಸೈ ನಮಸ್ತೈಸೈ ನಮಸ್ತೈಸೈ ನಮೋ ನಮಃ

ಬೆಳಿಗ್ಗೆ ಬೇಗ ಎದ್ದು ಮಡಿ ವಸ್ತ್ರ ಧರಿಸಿ ದೇವಿಯ ವಿಗ್ರಹ ಅಥವಾ ಫೋಟೋ ಮುಂದೆ ಈ ಮಂತ್ರವನ್ನು ಜಪಿಸುತ್ತಾ ಪೂಜೆ ಮಾಡುವುದರಿಂದ ಒಳಿತಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?