Select Your Language

Notifications

webdunia
webdunia
webdunia
webdunia

ನವರಾತ್ರಿ 4 ನೇ ದಿನ ಕೂಷ್ಮಾಂಡ ದೇವಿಯ ಯಾವ ಮಂತ್ರ ಹೇಳಬೇಕು

Kushmanda devi

Krishnaveni K

ಬೆಂಗಳೂರು , ಗುರುವಾರ, 25 ಸೆಪ್ಟಂಬರ್ 2025 (08:55 IST)
ಇಂದು ನವರಾತ್ರಿಯ ನಾಲ್ಕನೇ ದಿನವಾಗಿದ್ದು ಕೂಷ್ಮಾಂಡ ದೇವಿಯ ಆರಾಧನೆಗೆ ಸೂಕ್ತವಾದ ದಿನವಾಗಿದೆ. ಇಂದು ದೇವಿಗೆ ಹೇಗೆ ಪೂಜೆ ಮಾಡಬೇಕು ಮತ್ತು ಯಾವ ಮಂತ್ರ ಜಪಿಸಬೇಕು ಇಲ್ಲಿದೆ ಮಾಹಿತಿ.

ದುರ್ಗೆಯ ವಿವಿಧ ರೂಪಗಳಲ್ಲಿ ಕೂಷ್ಮಾಂಡ ದೇವಿಗೆ ಅದರದ್ದೇ ಆದ ವಿಶೇಷತೆಯಿದೆ. ಕೂಷ್ಮಾಂಡ ದೇವಿ ವಿಶ್ವವನ್ನೇ ಸೃಷ್ಟಿಸಿದಳು ಎಂಬ ನಂಬಿಕೆಯಿದೆ. ಕೂಷ್ಮಾಂಡ ಎಂದರೆ ಕುಂಬಳಕಾಯಿ ಎಂದರ್ಥ. ಈ ದೇವಿಗೆ ಕುಂಬಳಕಾಯಿಯನ್ನು ಅರ್ಪಿಸುವುದು ಅಥವಾ ಕುಂಬಳಕಾಯಿಯಿಂದ ಮಾಡಿದ ತಿನಿಸಿನ ನೈವೇದ್ಯ ಅರ್ಪಿಸುವುದು ವಿಶೇಷವಾಗಿದೆ.

ಕೂಷ್ಮಾಂಡ ದೇವಿಗೆ ಸಿಂಧೂರ, ಹೂವು, ಅಕ್ಷತೆಗಳನ್ನಿಟ್ಟು ಪೂಜೆ ಮಾಡಬೇಕು. ದೇವಿಗೆ ತುಪ್ಪದ ದೀಪ ಹಚ್ಚಬೇಕು. ಜೊತೆಗೆ ಕೂಷ್ಮಾಂಡ ತಾಯಿಯ ಮಂತ್ರವನ್ನು 108 ಬಾರಿ ಜಪಿಸಿ ಪೂಜೆ ಮಾಡಬೇಕು. ಕೂಷ್ಮಾಂಡ ತಾಯಿಯ ಮಂತ್ರ ಇಲ್ಲಿದೆ ನೋಡಿ.

ಯಾ ದೇವಿ ಸರ್ವಭೂತೇಷು
ಮಾಂ ಕೂಷ್ಮಾಂಡ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಅಥವಾ

ಓಂ ಏಂ ಹ್ರೀಂ ಕ್ಲೀಂ ಕೂಷ್ಮಾಂಡ ನಮಃ

Share this Story:

Follow Webdunia kannada

ಮುಂದಿನ ಸುದ್ದಿ

ಸಕಲ ದೋಷ ನಿವಾರಣೆಗಾಗಿ ಸುದರ್ಶನ ಅಷ್ಟಕಂ ತಪ್ಪದೇ ಓದಿ