Select Your Language

Notifications

webdunia
webdunia
webdunia
webdunia

ಕೇಂದ್ರ ಬಜೆಟ್ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

ಕೇಂದ್ರ ಬಜೆಟ್ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಬೆಂಗಳೂರು , ಶನಿವಾರ, 1 ಫೆಬ್ರವರಿ 2020 (07:40 IST)
ಬೆಂಗಳೂರು : ಇಂದು ಕೇಂದ್ರ ಸರ್ಕಾರದ 2ನೇ ಬಜೆಟ್ ಮಂಡನೆಯಾಗಲಿದ್ದು, ಈ ಬಗ್ಗೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು, ದೇಶದ ಆರ್ಥಿಕತೆ ಬಹಳಷ್ಟು ನಿಧಾನಗತಿಯಲ್ಲಿ ಸಾಗುತ್ತಿದೆ. ವಿಶ್ವದ ಆವರೇಜ್ ಜೆಡಿಪಿ ಗ್ರೋತ್ ಶೇ.2ಕ್ಕಿಂತ ಹೆಚ್ಚಿಲ್ಲ. ಕಠಿಣ ಆರ್ಥಿಕ ಪರಿಸ್ಥಿತಿಯ ಹಿನ್ನಲೆಯಲ್ಲಿ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಕೆಲ ಯೋಜನೆಗಳ ಮರು ಮಾರ್ಪಾಡು ಮಾಡಿ ದೇಶದಲ್ಲಿ ಅಸೆಟ್ ಕ್ರಿಯೇಟ್ ಮಾಡುವ ಕೆಲಸಕ್ಕೆ ಒತ್ತು ನೀಡಲಾಗುತ್ತದೆ ಎಂದು ಹೇಳಿದ್ದಾರೆ.


ಹಾಗೇ  ಯೂತ್ ಎನರ್ಜಿ ಭಾರತಕ್ಕೆ ಇದೆ. ಹೂಡಿಕೆಗೆ ಪೂರಕವಾದ ವಾತಾವರಣ ಭಾರತದಲ್ಲಿದೆ. ಆರ್ಥಿಕ ಹಿಂಜರಿತ ಮೀರಿ ಕೆಲಸ ಮಾಡೋ ಪ್ರಯತ್ನ ಮಾಡಲಾಗುತ್ತಿದೆ. ಅಭಿವೃದ್ಧಿ ಪೂರಕವಾದ ಒಂದು ಬಜೆಟ್ ಇರುತ್ತೆ. ಟ್ಯಾಕ್ಸ್ ನಲ್ಲಿ ಸರಳೀಕರಣ ಮಾಡುವ ವ್ಯವಸ್ಥೆ ಈ ಬಾರಿ ಕಾಣಬಹುದು ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಹಿತ್ಯ ಸಮ್ಮೇಳನಕ್ಕೆ ಹಳ್ಳಿಗರನ್ನು ಕರೆಯೋದಕ್ಕೆ ಬೀದಿ ನಾಟಕ