Select Your Language

Notifications

webdunia
webdunia
webdunia
webdunia

ಸಾಹಿತ್ಯ ಸಮ್ಮೇಳನಕ್ಕೆ ಹಳ್ಳಿಗರನ್ನು ಕರೆಯೋದಕ್ಕೆ ಬೀದಿ ನಾಟಕ

ಸಾಹಿತ್ಯ ಸಮ್ಮೇಳನಕ್ಕೆ ಹಳ್ಳಿಗರನ್ನು ಕರೆಯೋದಕ್ಕೆ ಬೀದಿ ನಾಟಕ
ಕಲಬುರಗಿ , ಶುಕ್ರವಾರ, 31 ಜನವರಿ 2020 (19:50 IST)
ಕಲಬುರಗಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಗ್ರಾಮೀಣ ಪ್ರದೇಶ ನಾಗರೀಕರನ್ನು ಆಹ್ವಾನಿಸಲಾಗುತ್ತಿದೆ.


ಇದಕ್ಕಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗ್ರಾಮ ಸಂಪರ್ಕ ಕಾರ್ಯಕ್ರಮದಡಿ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.

ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳ ಕ್ಷೇತ್ರ ಪ್ರಚಾರ ವಾಹನಗಳ ಮೂಲಕ ಬೀದಿ ನಾಟಕಗಳು ಹಾಗೂ ಜಾನಪದ ಸಂಗೀತ ಕಾರ್ಯಕ್ರಮಗಳ ಮೂಲಕ ಕಲಾವಿದವರು ಸಮ್ಮೇಳನಕ್ಕೆ ಆಹ್ವಾನಿಸುವ ಹಾಗೂ ಸರ್ಕಾರದ ಯೋಜನೆಗಳ ಮಾಹಿತಿ ನೀಡುತ್ತಿದ್ದಾರೆ.

ವಿಶೇಷವಾಗಿ ಸಿದ್ಧಪಡಿಸಿದ ಪ್ರಚಾರ ವಾಹನಗಳಿಗೆ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಸುವರ್ಣ ಹಣಮಂತ ಮಾಲಾಜಿ ಚಾಲನೆ ನೀಡಿದ್ದು, ಕಲಬುರಗಿ, ಬೀದರ್, ಯಾದಗರಿ, ರಾಯಚೂರ, ಕೊಪ್ಪಳ್ಳ ಮತ್ತು ಬಳ್ಳಾರಿ ಜಿಲ್ಲೆಗಳ ವಾಹನ ಹಾಗೂ ಒಟ್ಟು 48 ಬೀದಿ ನಾಟಕ ಕಲಾವಿದರು ಇದ್ರಲ್ಲಿ ಪಾಲ್ಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಾಹಿತ್ಯ ಸಮ್ಮೇಳನಕ್ಕಾಗಿ ಹಗ್ಗ-ಜಗ್ಗಾಟ : ಕ.ಸಾ.ಪ ತಂಡಕ್ಕೆ ಜಯ