Publish Date: Mon, 14 May 2018 (07:35 IST)
Updated Date: Mon, 14 May 2018 (07:37 IST)
ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಗಿದ ನಂತರ ಇದೀಗ ನಟ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗ್ಗೇಶ್ ಅವರು ಬೆಂಗಳೂರು ಜನರ ವಿರುದ್ಧ ಕಿಡಿಕಾರಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕೇವಲ 50 ಪರ್ಸೆಂಟ್ ಮತದಾನವಾಗಿದೆ. ಈ ಕಾರಣಕ್ಕೆ ನಟ ಜಗ್ಗೇಶ್ ಅವರು ಟ್ವೀಟರ್ ಮೂಲಕ ,’ಏನ್ ವೋಟ್ ಹಾಕಿದ್ದಾರೆ ಸಿಟಿ ಜನಗಳೇ, ಶಹಬಾಷ್ ಜೈ ಬೆಂಗಳೂರಿನ ವಾಸಿಗಳೆ!, ಏನು ಬದ್ಧತೆ, ಏನು ಪ್ರೇಮ, ಏನು ಸ್ವಾಭಿಮಾನ? ಅಂತರಾಷ್ಟ್ರದ ಗುಣಮಟ್ಟ ಬೇಕು ಅಂತಾ ಕೇಳ್ತಿರಿ. ಟಿವಿ ಕಂಡರೆ ಸಾಕು ಏನು ವಾದ ಮಂಡನೆ. ಮೆಚ್ಚಬೇಕು. ಹಳ್ಳಿಯಲ್ಲಿ ದುಡ್ಡಿಗೆ ವೋಟ್. ಸಿಟಿಯಲ್ಲಿ ಬೂತ್ ಕಡೆನೂ ತಿರುಗಿ ಸಹ ನೋಡಲ್ಲ. ಹೇಗೆ ಬದಲಾವಣೆ, ಯಾರಿಂದ ಬದಲಾವಣೆ, ಯಾಕೆ ಬದಲಾವಣೆ, ನಗೆ ಬರುತ್ತಿದೆ’ ಎಂದು ಬರೆದುಕೊಂಡು ಬೆಂಗಳೂರು ಕೇತ್ರಗಳಲ್ಲಿ ಮತದಾನದ ಶೇಕಡಾವಾರು ಮಾಹಿತಿಯುಳ್ಳ ಫೋಟೋ ಹಾಕಿಕೊಂಡು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ