Publish Date: Sun, 13 May 2018 (07:33 IST)
Updated Date: Sun, 13 May 2018 (07:35 IST)
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದ್ದು, ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್ ಕಿಂಗ್ ಮೇಕರ್ ಆಗುವ ಲಕ್ಷಣ ತೋರುತ್ತಿದೆ.
ಹೆಚ್ಚಿನ ಸಮೀಕ್ಷೆಗಳ ಪ್ರಕಾರ ಬಿಜೆಪಿ ಹೆಚ್ಚಿನ ಸೀಟು ಗೆಲ್ಲಬಹುದು ಎಂದಿದ್ದರೂ, ಅದಕ್ಕೂ ಬಹುಮತದ ಕೊರತೆ ಕಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಒಂದು ವೇಳೆ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ, ಅದಕ್ಕೂ ಬಹುಮತ ಸಿಗುವ ಸಾಧ್ಯತೆ ಕಡಿಮೆ. ಹೀಗಾಗಿ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಯಾವೆಲ್ಲಾ ಸಂಸ್ಥೆಯ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಬಹುದು ನೋಡೋಣ:
ಸಂಸ್ಥೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಇತರ
ಟೈಮ್ಸ್ ನೌ-ವಿಎಂಆರ್ 97 94 28 3
ಸಿ ವೋಟರ್ 93 103 25 1
ಜನ್ ಕೀ ಬಾತ್ 78 105 37 2
ಆಕ್ಸಿಸ್ ಮೈ ಇಂಡಿಯಾ 111 85 26 0
ಸಿಎನ್ಎಕ್ಸ್ 75 106 37 4
ನ್ಯೂಸ್ ಆಕ್ಷನ್ 73 107 38 4
ಟೈಮ್ಸ್ ಚಾಣಕ್ಯ 73 120 26 3
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.