Publish Date: Sat, 12 May 2018 (08:26 IST)
Updated Date: Sat, 12 May 2018 (08:29 IST)
ಬೆಂಗಳೂರು: ನಿಮ್ಮ ಮತ ಎಷ್ಟು ಅಮೂಲ್ಯವಾದುದು ಎನ್ನುವುದನ್ನು ಈತ ನಿರೂಪಿಸಿಯೇ ಬಿಟ್ಟಿದ್ದಾನೆ. ಮತದಾರನೊಬ್ಬ ಆಂಬ್ಯುಲೆನ್ಸ್ ನಲ್ಲಿ ಬಂದು ಮತಚಲಾಯಿಸಿದ ಘಟನೆ ನಡೆದಿದೆ.
ಕತ್ರಿಗುಪ್ಪೆಯಲ್ಲಿ ಈ ಘಟನೆ ನಡೆದಿದೆ. ಗಂಗಾರೆಡ್ಡಿ ಎಂಬವರು ಆಂಬ್ಯುಲೆನ್ಸ್ ನಲ್ಲಿ ಬಂದು ತಮ್ಮ ಮತದಾನದ ಹಕ್ಕನ್ನು ಪೂರ್ಣಗೊಳಿಸಿದ್ದಾರೆ.
ಇನ್ನು, ಪದ್ಮನಾಭ ಕ್ಷೇತ್ರದಲ್ಲಿ ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದ ನಟ ರಮೇಶ್ ಅರವಿಂದ್ ಮತದಾನ ಮಾಡಿದ್ದಾರೆ. ಇನ್ನೊಂದೆಡೆ ಮಹಿಳೆಯೊಬ್ಬರು ತಮ್ಮ ಸಾಕು ನಾಯಿ ಜತೆಗೇ ಬಂದು ಮತದಾನ ಮಾಡಿದ ಘಟನೆಯೂ ನಡೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.