Publish Date: Sun, 13 May 2018 (07:13 IST)
Updated Date: Sun, 13 May 2018 (07:15 IST)
ಬೆಂಗಳೂರು : ಕನ್ನಡದ ಹಾಸ್ಯನಟ ಚಿಕ್ಕಣ್ಣ ಅವರು ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರಂತೆ.
ಚಿಕ್ಕಣ್ಣ ಮೈಸೂರಿನ ಬಲ್ಲಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಮತದಾರರಾಗಿದ್ದರು. ಮತದಾನಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದರೂ ಕೂಡ ಅವರಿಗೆ ಮತದಾನ ಮಾಡಲು ಆಗಲಿಲ್ಲ. ಕಾರಣ ಚಿಕ್ಕಣ್ಣ ಅವರು ಗ್ರಾಮದಲ್ಲಿ ವಾಸವಿಲ್ಲದೇ ಇರುವುದರಿಂದ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗದೆಯಂತೆ. ಕೊನೆಗೂ ಚಿಕ್ಕಣ ತಮ್ಮ ಮತದಾನ ಮಾಡದೆ ಬೇಸರದಿಂದ ವಾಪಸ್ ಆಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ