Publish Date: Sun, 13 May 2018 (07:04 IST)
Updated Date: Sun, 13 May 2018 (07:06 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರು ತಮ್ಮ ಅಚ್ಚುಮೆಚ್ಚಿನ ನಾಯಿ ಮರಿಯನ್ನು ಕಳೆದುಕೊಂಡು ಇದೀಗ ದುಖಃದಲ್ಲಿದ್ದಾರಂತೆ.
ರಕ್ಷಿತಾ ಅವರಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಅವರ ಮನೆಯಲ್ಲಿ ಎರಡು ಸಾಕು ನಾಯಿಗಳಿದ್ದು ಅದರಲ್ಲಿ ಹ್ಯಾಪಿ ಎಂಬ ನಾಯಿ ಮೃತಪಟ್ಟಿದೆ. ಈ ಹ್ಯಾಪಿ ಚೀನಾ ಮೂಲದ ಚಿಕ್ಕಮರಿ ಆಗಿದ್ದು, ‘ಪಗ್’ ಜಾತಿಗೆ ಸೇರಿದೆ. ಪಗ್ ಜಾತಿಯ ನಾಯಿಗಳು 12 ರಿಂದ 15 ವರ್ಷಗಳ ಕಾಲ ಬದುಕುತ್ತದೆ.
12 ವರ್ಷದಿಂದ ರಕ್ಷಿತಾ ಜೊತೆಯಲ್ಲೇ ಇದ್ದ ಹ್ಯಾಪಿ ಎಂಬ ನಾಯಿಮರಿ ಸಾವನಪ್ಪಿದ್ದು, ಇದೀಗ ರಕ್ಷಿತಾ ಅವರು ದುಖಃದಲ್ಲಿ ಮುಳುಗುವಂತೆ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ