Publish Date: Sat, 12 May 2018 (15:03 IST)
Updated Date: Sat, 12 May 2018 (15:06 IST)
ಬೆಂಗಳೂರು : ಇಂದು ರಾಜ್ಯ ವಿಧಾನಸಭಾ ಚುನಾವಣೆ ಭರದಿಂದ ಸಾಗುತ್ತಿದ್ದು, ಸಿನಿಮಾ ತಾರೆಯರು ಕೂಡ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಅದೇರೀತಿ ನಟ ಉಪೇಂದ್ರ ಅವರು ಕೂಡ ತಮ್ಮ ಪತ್ನಿಯೊಂದಿಗೆ ಮತಗಟ್ಟೆಗೆ ತೆರಳಿ ಮತ ಹಾಕದ್ದಾರೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,’ ನಾನು ಪಕ್ಷ ಮಾಡುವಾಗಲೂ ಪ್ರಜೆಯಾಗಿ ಮಾಡಿದ್ದೇನೆ. ನಾಯಕನಾಗಿ ಅಲ್ಲ. ಪ್ರಜೆಗಳಿಗೂ ನಾನು ಇದೇ ಹೇಳಿದ್ದೇನೆ. ಇವತ್ತು ಒಂದು ದಿನ ನಾನು ಪ್ರಜೆ. ಪ್ರತಿ 5 ವರ್ಷಗೊಮ್ಮೆ ಮತದಾನ ಮಾಡಲು ಅವಕಾಶ ಬರುತ್ತದೆ. ಆದ್ದರಿಂದ ನನಗೆ ಇಂದು ವೋಟ್ ಮಾಡಲು ತುಂಬಾ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ರಾಜಕೀಯದ ಬಗ್ಗೆ ಮಾತನಾಡಿದ ಅವರು, ನಮ್ಮ ರಾಜ್ಯ ರಾಜಕೀಯದ ಬಗ್ಗೆ ಪ್ರಜೆಗಳಿಗೆ ತಿಳಿದಿದ್ದರು. ಇಂದು 60% ಜನರು ಮತದಾನ ಮಾಡುತ್ತಾರೆ ಎಂದರೆ ಅದು ನಿಜವಾಗಿಯೂ ಗ್ರೇಟ್ ಆಗಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ