Publish Date: Sun, 13 May 2018 (07:37 IST)
Updated Date: Sun, 13 May 2018 (07:38 IST)
ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಎಕ್ಸಿಟ್ ಪೋಲ್ ಫಲಿತಾಂಶ ಬಂದಿದ್ದು, ಬಿಜೆಪಿಗೆ ಬಹುಮತ ಬರಬಹುದೆಂದು ಲೆಕ್ಕಾಚಾರ ಹಾಕಲಾಗಿದೆ.
ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಸಮೀಕ್ಷೆಗಳು ಏನೇ ಹೇಳಲಿ. ಇಂತಹ ಎಷ್ಟೋ ಸಮೀಕ್ಷೆಗಳನ್ನು ನೋಡಿದ್ದೇನೆ. ನಾವು ಗೆದ್ದೇ ಗೆಲ್ಲುತ್ತೇವೆ. ಬಹುಮತದಿಂದ ಗೆದ್ದು ಸರ್ಕಾರ ರಚಿಸುತ್ತೇವೆ. ಸಮ್ಮಿಶ್ರ ಸರ್ಕಾರದ ಪ್ರಶ್ನೆಯೇ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ, ಬಿಜೆಪಿಯವರು ಹೇಳುವಂತೆ ಮಿಷನ್ 150 ಕನಸೆಲ್ಲಾ ನನಸಾಗಲ್ಲ. ಬಿಜೆಪಿಯವರು ಬೇಕಾದರೆ ಮನೆಯಲ್ಲೇ ಮಿಷನ್ ಇಟ್ಟುಕೊಂಡು ರುಬ್ಬಲಿ. ನಾನು ಬಾದಾಮಿಯಲ್ಲೂ ಗೆಲ್ಲುತ್ತೇನೆ, ಚಾಮುಂಡೇಶ್ವರಿಯಲ್ಲೂ ಗೆಲ್ಲುತ್ತೇನೆ. ನಮ್ಮ ಪಕ್ಷದ ಅಭ್ಯರ್ಥಿಗಳೆಲ್ಲರೂ ಗೆಲುವು ಸಾಧಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.