Select Your Language

Notifications

webdunia
webdunia
webdunia
webdunia

ತಿಮ್ಮಪ್ಪನ ವಿಶೇಷ ದರ್ಶನ : ಆನ್‌ಲೈನ್ ಟಿಕೆಟ್ ಬುಕಿಂಗ್ ಆರಂಭ

ತಿಮ್ಮಪ್ಪನ ವಿಶೇಷ ದರ್ಶನ : ಆನ್‌ಲೈನ್ ಟಿಕೆಟ್ ಬುಕಿಂಗ್ ಆರಂಭ
ಬೆಂಗಳೂರು , ಶುಕ್ರವಾರ, 28 ಜನವರಿ 2022 (14:48 IST)
ತಿರುಪತಿ : ದೇಶದ ಪ್ರಮುಖ ಯಾತ್ರಾ ಸ್ಥಳದಲ್ಲಿ ಒಂದಾಗಿರುವ ತಿರುಪತಿ ವೆಂಕಟೇಶ್ವರ ದೇವರ ವಿಶೇಷ ದರ್ಶನ ಪಡೆಯಲು ಟಿಟಿಡಿ ಆನ್ಲೈನ್ ಬುಕಿಂಗ್ ಸರ್ವಿಸ್ ಅನ್ನು ಆರಂಭಿಸಿದೆ.

ಫೆಬ್ರವರಿ ತಿಂಗಳಿನಲ್ಲಿ ಆಗಮಿಸುವ ಭಕ್ತರಿಗೆ ಟಿಟಿಡಿ ಆನ್ಲೈನ್ ಬುಕಿಂಗ್ ಅನ್ನು ಇಂದು (ಜ.28) ಬೆಳಗ್ಗೆ 9 ಗಂಟೆಯಿಂದ ಆರಂಭಿಸಿದೆ.

 
ವಿಶೇಷ ದರ್ಶನಕ್ಕೆ 300 ರೂಗಳನ್ನು ನಿಗದಿ ಪಡಿಸಿದ್ದು, ಟಿಟಿಡಿಯ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ಲೈನ್ನಲ್ಲಿ ಬುಕಿಂಗ್ ಮಾಡಬಹುದಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಂ ಅಥವಾ ವೆಂಕಟೇಶ್ವರ ದೇವಸ್ಥಾನದ ಅಧಿಕೃತ ವೆಬ್ಸೈಟ್ನಿಂದ ಅನ್ಲೈನ್ ಬುಕಿಂಗ್ ಆರಂಭಿಸಿದೆ.

 
ಇನ್ನು ಉಚಿತವಾಗಿ ನೀಡುವ ಸೇವಾ ದರ್ಶನಕ್ಕೆ ಜನವರಿ 29ರಿಂದ ಆನ್ಲೈನ್ ಬುಕಿಂಗ್ ಆರಂಭವಾಗಲಿದೆ. ಟಿಕೆಟ್ ಬುಕ್ ಮಾಡುವವರಿಗೆ ಇ ಮೇಲ್ ಐಡಿ ಕಡ್ಡಾಯವಾಗಿದೆ. ಬುಕಿಂಗ್ ಮಾಡಿದ ತಕ್ಷಣ ಒಟಿಪಿ, ಹಾಗೂ ಬುಕಿಂಗ್ ಆದ ಮೆಸೇಜ್ ಇ ಮೇಲ್ಗೆ ಬರಲಿದೆ ಎಂದು ತಿಳಿಸಲಾಗಿದೆ.

ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನಲೆ ಕೊರೊನಾ ಆತಂಕ ಎದುರಾಗಿದೆ. ಈ ಕಾರಣದಿಂದ ಪ್ರತಿದಿನ 50 ಸಾವಿರದಿಂದ ಒಂದು ಲಕ್ಷ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

 
ಆನ್ಲೈನ್ನಲ್ಲಿ ಬುಕಿಂಗ್ ಮಾಡಿದವರಿಗೆ ವಿಶೇಷ ದರ್ಶನ ಸಮಯ – 9:00 ಹಾಗೂ ಬೆಳಿಗ್ಗೆ, 5:00 ಸಂಜೆ ಆಗಿದೆ. https://tirupatibalaji.ap.gov.in, https://ttdsevaonline.com ಇದು ಟಿಟಿಡಿಯ ಅಧಿಕೃತ ಲಿಂಕ್ ಆಗಿದ್ದು, ಟಿಟಿಡಿ ಲಡ್ಡು ಸೇವಾ ಆನ್ಲೈನ್ ಬುಕಿಂಗ್ ಟಿಕೆಟ್ಗಳನ್ನು ಕೂಡ ಪಡೆಯಬಹುದು.

 


Share this Story:

Follow Webdunia kannada

ಮುಂದಿನ ಸುದ್ದಿ

ಹುತಾತ್ಮರ ದಿನಾಚರಣೆ; ಪೂರ್ವಭಾವಿ ಸಭೆ