Select Your Language

Notifications

webdunia
webdunia
webdunia
webdunia

ಭಾರತದ ಅತೀ ದೊಡ್ಡ ಖಾದಿ ರಾಷ್ಟ್ರಧ್ವಜ!

ಭಾರತದ ಅತೀ ದೊಡ್ಡ ಖಾದಿ ರಾಷ್ಟ್ರಧ್ವಜ!
ಜೈಪುರ , ಭಾನುವಾರ, 16 ಜನವರಿ 2022 (17:31 IST)
ಜೈಪುರ : ಶನಿವಾರ ದೇಶಾದ್ಯಂತ 74ನೇ ಸೇನಾ ದಿನವನ್ನು ಆಚರಿಸಲಾಯಿತು. ಈ ದಿನ ವಿಶ್ವದಲ್ಲೇ ಅತೀ ದೊಡ್ಡ ಭಾರತದ ಖಾದಿ ರಾಷ್ಟ್ರಧ್ವಜವನ್ನು ರಾಜಸ್ಥಾನದ ಜೈಸಲ್ಮೇರ್ನಲ್ಲಿ ಅನಾವರಣ ಮಾಡಲಾಗಿದೆ.
 
1971ರಲ್ಲಿ ಭಾರತ-ಪಾಕಿಸ್ತಾನ ನಡುವೆ ರಾಜಸ್ಥಾನದ ಲೋಂಗೇವಾಲಾ ಗಡಿಯಲ್ಲಿ ಐತಿಹಾಸಿಕ ಯುದ್ಧ ನಡೆದಿತ್ತು. ಈ ಪ್ರದೇಶದಲ್ಲಿ ವಿಶ್ವದ ಅತೀ ದೊಡ್ಡ ಭಾರತದ ಧ್ವಜವನ್ನು ಶನಿವಾರ ಪ್ರದರ್ಶನಕ್ಕೆ ಇಡಲಾಗಿದೆ. 

225 ಅಡಿ ಉದ್ದ, 150 ಅಡಿ ಅಗಲದ ಹಾಗೂ 1,400 ಕೆಜಿ ಭಾರವಿರುವ ಭಾರತೀಯ ಧ್ವಜವನ್ನು ಸಂಪೂರ್ಣ ಖಾದಿಯಿಂದ ತಯಾರಿಸಲಾಗಿದೆ. 70 ಮಂದಿ ಖಾದಿ ಕುಶಲ ಕರ್ಮಿಗಳು ಈ ಧ್ವಜವನ್ನು ತಯಾರಿಸಲು 49 ದಿನಗಳನ್ನು ತೆಗೆದುಕೊಂಡಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸಾಂಕ್ರಾಮಿಕ ಶಾಶ್ವತವಾಗಿರಲ್ಲ!?