Select Your Language

Notifications

webdunia
webdunia
webdunia
webdunia

ಮಹಿಳೆಗಾಗಿ ಗಡಿ ದಾಟಿದ ಪಾಕ್ ಯುವಕ!

ಮಹಿಳೆಗಾಗಿ ಗಡಿ ದಾಟಿದ ಪಾಕ್ ಯುವಕ!
ಜೈಪುರ , ಸೋಮವಾರ, 6 ಡಿಸೆಂಬರ್ 2021 (17:27 IST)
ಜೈಪುರ : ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯನ್ನು ದಾಟಿ ಬಂದ 21 ವರ್ಷದ ಪಾಕಿಸ್ತಾನ ಯುವಕನನ್ನು ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ವಶಕ್ಕೆ ಪಡೆದುಕೊಂಡಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಮೂಲಕ ಯುವಕ ಭಾರತಕ್ಕೆ ಆಗಮಿಸಿರುವ ಯುವಕ ಸೋಶಿಯಲ್ ಮೀಡಿಯಾ ಮೂಲಕ ಸ್ನೇಹ ಹೊಂದಿದ್ದ ಮುಂಬೈನ ಮಹಿಳೆಯನ್ನು ಭೇಟಿಯಾಗುವ ಸಲುವಾಗಿ ಗಡಿ ದಾಟಿರುವುದಾಗಿ ತಿಳಿಸಿದ್ದಾನೆ. ಯುವಕ ಪಾಕಿಸ್ತಾನದ ಪಂಜಾಬ್ನ ಬಹವಾಲ್ಪುರ ಜಿಲ್ಲೆಯ ನಿವಾಸಿಯಾಗಿರುವುದಾಗಿ ಶ್ರೀಗಂಗಾನಗರದ ಅನುಪ್ಗಢ ಪೊಲೀಸ್ ಠಾಣೆಯ ಠಾಣಾಧಿಕಾರಿ ಫೂಲ್ ಚಂದ್ ತಿಳಿಸಿದ್ದಾರೆ. 
ಯುವಕನ ನಿವಾಸ ಪಾಕಿಸ್ತಾನದ ಗಡಿ ಸಮೀಪದಲ್ಲಿದ್ದು, ಮುಂಬೈನಲ್ಲಿ ಮಹಿಳೆಯನ್ನು ಭೇಟಿಯಾಗಲು ಆಗಮಿಸಿರುವುದಾಗಿ ತಿಳಿಸಿದ್ದಾನೆ. ಸದ್ಯ ವಿವಿಧ ಭದ್ರತಾ ಏಜೆನ್ಸಿಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ವಿಚಾರಣೆ ಸಮಿತಿ (ಜೆಐಸಿ)ಯಿಂದ ಯುವಕನನ್ನು ಪ್ರಶ್ನಿಸಲಾಗುವುದು ಎಂದು ಶ್ರೀಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಶರ್ಮಾ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚೀಲದಲ್ಲಿ ನವಜಾತ ಹೆಣ್ಣು ಶಿಶುವಿನ ಪತ್ತೆ!