Select Your Language

Notifications

webdunia
webdunia
webdunia
webdunia

ಚೀಲದಲ್ಲಿ ನವಜಾತ ಹೆಣ್ಣು ಶಿಶುವಿನ ಪತ್ತೆ!

ಅಂಗನವಾಡಿ
ಚಾಮರಾಜನಗರ , ಸೋಮವಾರ, 6 ಡಿಸೆಂಬರ್ 2021 (17:11 IST)
ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಕಾವೇರಿ ರಸ್ತೆಯ ಚರಂಡಿ ಬಳಿ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ.
ಕಾವೇರಿ ರಸ್ತೆಯ ಅಂಗನವಾಡಿ ಮುಂಭಾಗದ ಚರಂಡಿ ಬಳಿ ಚೀಲವೊಂದರಲ್ಲಿ ನವಜಾತ ಶಿಶುವನ್ನು ಇಟ್ಟು ಬಿಸಾಡಲಾಗಿತ್ತು. ಚೀಲ ತೆಗೆದು ನೋಡಿದಾಗ ನವಜಾತ ಶಿಶು ಕಂಡು ಗಾಬರಿಗೊಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದು, ಹೆತ್ತವರೇ ಚೀಲದಲ್ಲಿಟ್ಟು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಮೈತ್ರಿ ಭವಿಷ್ಯ ಶೀಘ್ರದಲ್ಲೇ