Select Your Language

Notifications

webdunia
webdunia
webdunia
webdunia

ಪಾಲಕ್ಕಾಡ್, ಗೋಣಿಚೀಲದಲ್ಲಿ ಶಸ್ತ್ರಾಸ್ತ್ರಗಳು ಪತ್ತೆ: ವೈಜ್ಞಾನಿಕ ಪರೀಕ್ಷೆಗೆ ರವಾನೆ

ಪಾಲಕ್ಕಾಡ್, ಗೋಣಿಚೀಲದಲ್ಲಿ ಶಸ್ತ್ರಾಸ್ತ್ರಗಳು ಪತ್ತೆ: ವೈಜ್ಞಾನಿಕ ಪರೀಕ್ಷೆಗೆ ರವಾನೆ
bangalore , ಗುರುವಾರ, 18 ನವೆಂಬರ್ 2021 (21:34 IST)
ಪಾಲಕ್ಕಾಡು ಜಿಲ್ಲೆಯ ಕಣ್ಣನ್ನೂರು ಎಂಬಲ್ಲಿ ಗೋಣಿಚೀಲವೊಂದರಲ್ಲಿ ಶಸ್ತ್ರಾಸ್ತ್ರಗಳನ್ನು ಎಸೆದು ಹೋಗಿರುವುದು ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾಲಕ್ಕಾಡು ಎಲಪಲ್ಲಿಯಲ್ಲಿ ಇತ್ತೀಚೆಗೆ ಆರ್’ಎಸ್‍ಎಸ್ ಮಂಡಲ ಬೌದ್ಧಿಕ್ ಪ್ರಮುಖ್ ಆಗಿದ್ದ ಸಂಜಿತ್‍ರನ್ನು ಕೊಲೆಗೈದ ಪಾತಕಿಗಳು ಶಸ್ತ್ರಾಸ್ತ್ರಗಳನ್ನು ಎಸೆದು ಪರಾರಿಯಾಗಿರಬಹುದೆಂದು ಸಂಶಯಿಸಲಾಗಿದೆ.
ನಾಲ್ಕು ರಾಡ್ ಗಳನ್ನು ಗೋಣಿಚೀಲದಲ್ಲಿ ಸುತ್ತಿ ಎಸೆದಿರುವುದು ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯ ಸರ್ವೀಸ್ ರಸ್ತೆ ಪರಿಸರದಲ್ಲಿ ಈ ಶಸ್ತ್ರಾಸ್ತ್ರಗಳು ಕಂಡುಬಂದಿವೆ. ಇದನ್ನು ಗಮನಿಸಿದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸಿಐಎ ನೇತೃತ್ವದ ಪೊಲೀಸರು ಶಸ್ತ್ರಾಸ್ತ್ರಗಳನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದ್ದಾರೆ.
ನಾಲ್ಕು ಸರಳುಗಳಲ್ಲಿ ಎರಡು ತುಕ್ಕು ಹಿಡಿದಿರುವುದು ಕಂಡು ಬಂದಿದೆ. ಆದರೆ ಒಂದು ಬಹುಮಟ್ಟಿಗೆ ಹೊಸದು. ರಕ್ತದ ಕಲೆಗಳು ಅಥವಾ ಇತರ ಚಿಹ್ನೆಗಳು ಸ್ಪಷ್ಟವಾಗಿಲ್ಲ. ವೈಜ್ಞಾನಿಕ ಪರೀಕ್ಷೆಯ ನಂತರವಷ್ಟೇ ಎಲಪಲ್ಲಿಯಲ್ಲಿ ನಡೆದ ಕೊಲೆಗೂ ಈ ಆಯುಧಗಳಿಗೂ ಸಂಬಂಧವಿದೆಯೇ ಎಂಬುದು ಖಚಿತವಾಗಲಿದೆ ಎಂದು ಸಿಐ ತಿಳಿಸಿದ್ದಾರೆ. ಇದೇ ವೇಳೆ ಸಂಜಿತ್ ರನ್ನು ಕೊಲೆಗೈದು ಎರಡು ದಿನಗಳು ಕಳೆದರೂ ಹಂತಕರನ್ನು ಪತ್ತೆಹಚ್ಚುವಲ್ಲಿ ಹಾಗೂ ಯಾವುದೇ ಸಾಕ್ಷ್ಯವನ್ನು ಹುಡುಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಬಿಜೆಪಿ ಪಾಲಕ್ಕಾಡು ಮಂಡಲ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಈ 12 ನಗರಗಳಲ್ಲಿ ವಾಯು ಗುಣಮಟ್ಟ ಬೆಸ್ಟ್: ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ