Select Your Language

Notifications

webdunia
webdunia
webdunia
webdunia

ದುಬೈನಲ್ಲಿ ‘ಬಾಹ್ಯಾಕಾಶ’ದ ಅಪೂರ್ವ ಕಪ್ಪು ವಜ್ರ ಪ್ರದರ್ಶನ

ದುಬೈನಲ್ಲಿ ‘ಬಾಹ್ಯಾಕಾಶ’ದ ಅಪೂರ್ವ ಕಪ್ಪು ವಜ್ರ ಪ್ರದರ್ಶನ
bangalore , ಬುಧವಾರ, 19 ಜನವರಿ 2022 (20:50 IST)
ಅಂತಾರಾಷ್ಟ್ರೀಯ ಹರಾಜು‌ ಸಂಸ್ಥೆಯಾದ ಸೊದೆಬಿಯ ದುಬೈ ಘಟಕವು  ಬಾಹ್ಯಾಕಾಶದಿಂದ ಬಂದಿದೆಯೆಂದು ನಂಬಲಾದ ಅಪರೂಪದ ಕಪ್ಪುವಜ್ರವನ್ನು ಪ್ರದರ್ಶನಕ್ಕಿರಿಸಿದೆ.
‘ದಿ ಎನಿಗ್ಮಾ’ ಎಂದು ಹೆಸರಿಡಲಾದ 555.55 ಕ್ಯಾರಟ್‌ನ ಕಪ್ಪು ವಜ್ರವು ಫೆಬ್ರವರಿಯಲ್ಲಿ ಲಂಡನ್‌ನಲ್ಲಿ ಹರಾಜಾಗಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ದುಬೈ ಹಾಗೂ ಅಮೆರಿಕದ ಲಾಸ್‌ಏಂಜಲೀಸ್‌ನಲ್ಲಿ ಅದರ ಪ್ರದರ್ಶನವನ್ನೇಪಡಿಸಲಾಗಿದೆ. ಸೋಮವಾರ ಈ ಅಪರೂಪದ ವಜ್ರವನ್ನು ಪತ್ರಕರ್ತರಿಗೆ ಪ್ರದರ್ಶಿಸಲಾಯಿತು.
ಈ ಅಪೂರ್ವ ವಜ್ರವು ಕನಿಷ್ಠ 50 ಲಕ್ಷ ಬ್ರಿಟಿಶ್ ಪೌಂಡ್ (6.8 ದಶಲಕ್ಷ ಡಾಲರ್) ಬೆಲೆಗೆ ಮಾರಾಟವಾಗುವ ನಿರೀಕ್ಷೆಯನ್ನು ಸೊದೆಬಿ ಹೊಂದಿದೆ. ಕ್ರಿಪ್ಟೊಕರೆನ್ಸಿಯನ್ನು ಕೂಡಾ ಪಾವತಿಯ ವಿಧಾನವಾಗಿ ಸ್ವೀಕರಿಸುವ ಯೋಜನೆಯನ್ನು ಸೊದೆಬಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
‘ಎನಿಗ್ಮಾ’ ಕಪ್ಪು ವಜ್ರಕ್ಕೆ 5 ಅಂಕಿ ಮಹತ್ವದ್ದಾಗಿದೆ. ಈ ವಜ್ರವು 555.5 ಕ್ಯಾರಟ್ನದ್ದಾಗಿದ್ದು, 55 ಮುಖಗಳನ್ನು ಹೊಂದಿದೆಯೆಂದು ‘ಸೊದೆಬಿ ದುಬೈ’ನ ಆಭರಣ ತಜ್ಡೆ ಸೋಫಿ ಸ್ಟೀವನ್ಸ್ ತಿಳಿಸಿದ್ದಾರೆ.
ಈ ಕಪ್ಪು ವಜ್ರವು ಬಾಹ್ಯಾಕಾಶ ಮೂಲದ್ದೆಂದು ನಾವು ನಂಬುತ್ತೇವೆ. ಉಲ್ಕಾಶಿಲೆಗಳು ಭೂಮಿಯೊಂದಿಗೆ ಘರ್ಷಿಸುವಾಗ ಉಂಟಾಗುವ ರಾಸಾಯನಿಕ ಅನಿಲ ಸಂಯೋಜನೆಯಿಂದ ಈ ಕಪ್ಪು ಶಿಲೆ ರೂಪುಗೊಂಡಿರಬಹುದು ಅಥವಾ ಸ್ವತಃ ಉಲ್ಕಾಶಿಲೆಗಳಿಂದಲೇ ಅದು ಭೂಮಿಗೆ ಬಂದಿರಬಹುದು’’ ಎಂದು ಸೋಫಿಸ್ಟೀವನ್ಸ್ ಹೇಳಿದ್ದಾರೆ.
ಕಾರ್ಬನಾಡೊ ಎಂದು ಕೂಡಾ ಕರೆಯಲಾಗುವ ಕಪ್ಪುವಜ್ರವು ಅತ್ಯಂತ ಅಪರೂಪವಾಗಿ ದೊರೆಯುತ್ತದೆ. ಈವರೆಗೆ ಪ್ರಾಕೃತಿಕವಾಗಿ ಬ್ರೆಝಿಲ್ ಹಾಗೂ ಮಧ್ಯ ಆಫ್ರಿಕದಲ್ಲಿ ಮಾತ್ರವೇ ಸಿಕ್ಕಿವೆ.‌
ಈ ಅಪೂರ್ವ ವಜ್ರವು ಕನಿಷ್ಠ 50 ಲಕ್ಷ ಬ್ರಿಟಿಶ್ ಪೌಂಡ್ (6.8 ದಶಲಕ್ಷ ಡಾಲರ್) ಬೆಲೆಗೆ ಮಾರಾಟವಾಗುವ ನಿರೀಕ್ಷೆಯನ್ನು ಸೊದೆಬಿ ಹೊಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೇವಾ ಶುಲ್ಕ ಗ್ರಾಹಕರ ಮೇಲೆ ಹೇರುವಂತಿಲ್ಲ- ಹೊಟೇಲ್‌ಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ