Select Your Language

Notifications

webdunia
webdunia
webdunia
webdunia

ವಿಶ್ವದ ಮೊದಲ ಪೇಪರ್ಲೆಸ್ ಸರ್ಕಾರ ಯಾವುದು?

ವಿಶ್ವದ ಮೊದಲ ಪೇಪರ್ಲೆಸ್ ಸರ್ಕಾರ ಯಾವುದು?
ದುಬೈ , ಮಂಗಳವಾರ, 14 ಡಿಸೆಂಬರ್ 2021 (09:22 IST)
ದುಬೈ : ವಿಶ್ವದ ಮೊದಲ ಪೇಪರ್ಲೆಸ್ ಸರ್ಕಾರ ದುಬೈ ಆಗಿದೆ. ಶೇ.100ರಷ್ಟು ಕಾಗದರಹಿತ ಆಡಳಿತ ಜಾರಿ ಮಾಡಿದ ವಿಶ್ವದ ಮೊದಲ ದೇಶ ಎಂಬ ಖ್ಯಾತಿಗೆ ದುಬೈ ಪಾತ್ರವಾಗಿದೆ ಎಂದು ಯುವರಾಜ ಶೇಖ್ ಹಮದ್ ಬಿನ್ ಮಹಮ್ಮದ್ ಬಿನ್ ರಶೀದ್ ಆಲ್ ಮುಕ್ತುಮ್ ಶನಿವಾರ ಘೋಷಿಸಿದ್ದಾರೆ.
 
ದುಬೈ 2.65 ಲಕ್ಷ ಕೋಟಿ ಹಣ ಮತ್ತು 1.4ಲಕ್ಷ ಕೋಟಿ ಮಾನವ ಗಂಟೆಗಳನ್ನು ಉಳಿತಾಯ ಮಾಡಿದೆ ಎಂದು ತಿಳಿಸಿದ್ದಾರೆ. ಇನ್ಮುಂದೆ ದುಬೈ ಸರ್ಕಾರದ ಎಲ್ಲಾ ಆಂತರಿಕ ಮತ್ತು ಬಾಹ್ಯ ವಹಿವಾಟು ಮತ್ತು ಕಾರ್ಯ ವಿಧಾನಗಳು ಶೇ.100ರಷ್ಟು ಡಿಜಿಟಲ್ ಆಗಿರಲಿದೆ. 

ದುಬೈನಲ್ಲಿ ಕಾಗದರಹಿತ ಆಡಳಿತವನ್ನು 5 ಹಂತಗಳ ಮೂಲಕವಾಗಿ ಅಳವಡಿಸಿಕೊಳ್ಳಲಾಗಿದೆ. 5ನೇ ಹಂತದ ವೇಳೆಗೆ ದುಬೈನ ಎಲ್ಲಾ 45 ಸರ್ಕಾರಿ ಘಟಕಗಳ ಕಾರ್ಯತಂತ್ರವನ್ನು ಸಂಪೂರ್ಣವಾಗಿ ಕಾಗದರಹಿತ ಮಾಡಲಾಗಿದೆ.

ಈ ಘಟಕಗಳು 1,800ಕ್ಕೂ ಹೆಚ್ಚು ಡಿಜಿಟಲ್ ಸೇವೆಯನ್ನು ಮತ್ತು 10,500ಕ್ಕೂ ಹೆಚ್ಚು ಪ್ರಮುಖ ವಹಿವಾಟುಗಳನ್ನು ಒದಗಿಸುತ್ತದೆ. ಇದರಿಂದ ದುಬೈ ನಿವಾಸಿಗಳ ನಿರೇಕ್ಷೆಗಳನ್ನು ಪೂರೈಸಲು ಸರ್ಕಾರಕ್ಕೆ ನೆರವಾಗುತ್ತದೆ ಎಂದು ಶೇಖ್ ಹಮದ್ ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ!