Select Your Language

Notifications

webdunia
webdunia
webdunia
Wednesday, 9 April 2025
webdunia

ದುಬೈನಿಂದ ಬಂದವನು ಚೆಲ್ಲಾಟವಾಡಿದ ತಪ್ಪಿಗೆ ಕೊಲೆಯಾದನಾ?!

ಕೊಲೆ
ಕಲಬುರ್ಗಿ , ಗುರುವಾರ, 9 ಡಿಸೆಂಬರ್ 2021 (10:00 IST)
ಕಲಬುರ್ಗಿ: ಮೂರು ಮಕ್ಕಳ ತಂದೆ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಪ್ರಕರಣ ಕುಲಬರ್ಗಿಯ ಕಮಲಾಪುರದಲ್ಲಿ ನಡೆದಿದೆ.

ದುಬೈನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊರೋನಾ ಸಮಯದಲ್ಲಿ ಕೆಲಸ ಕಳೆದುಕೊಂಡು ತವರಿಗೆ ಬಂದಿದ್ದ. ತನ್ನ ಕುಟುಂಬ ನಿರ್ವಹಣೆಗೆ ಸತ್ಯ ಸಾಯಿ ವಿವಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ.

ನಿನ್ನೆ ಕೆಲಸ ಮುಗಿಸಿ ಮನೆಗೆ ಮರಳುವುದಾಗಿ ಹೇಳಿ ಹೊರಟವನು ದಾರಿ ಮಧ್ಯೆ ತೋಟವೊಂದರಲ್ಲಿ ಹೆಣವಾಗಿದ್ದಾನೆ. ಮೃತದೇಹ ವಿವಸ್ತ್ರವಾಗಿದ್ದು ಕಂಡುಬಂದಿದೆ. ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದ ಈತ ವಿವಸ್ತ್ರ ಸ್ಥಿತಿಯಲ್ಲಿ ಹೆಣವಾಗಿದ್ದನ್ನು ಕಂಡ ಪೊಲೀಸರು ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿದ್ದಾರೆ. ಅನೈತಿಕ ಸಂಬಂಧದಿಂದಾಗಿಯೇ ಈತನನ್ನು ಯಾರೋ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ಲೀಲ ವಿಡಿಯೋ ತೋರಿಸಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ