ಲಕ್ನೋ: ತಾನು ಪ್ರೀತಿಸಿದ ಹುಡುಗಿ ಬೇರೆ ವರನ ಜೊತೆ ಮದುವೆಯಾಗುತ್ತಿದ್ದಾಳೆ ಎಂದು ತಿಳಿದು ಮದುವೆ ಮಂಟಪಕ್ಕೇ ಬಂದ ಪ್ರಿಯಕರ ಆಕೆಯ ಹಣೆಗೆ ಎಲ್ಲರೂ ನೋಡುತ್ತಿರುವಂತೆಯೇ ಸಿಂಧೂರ ಇಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
									
			
			 
 			
 
 			
			                     
							
							
			        							
								
																	ಇಬ್ಬರೂ ಕಳೆದ ಕೆಲವು ಸಮಯದಿಂದ ಪ್ರೇಮಿಗಳಾಗಿದ್ದರು. ಈ ನಡುವೆ ಪ್ರಿಯಕರ ಕೆಲಸಕ್ಕಾಗಿ ಬೇರೆ ನಗರಕ್ಕೆ ಹೋಗಿದ್ದ. ಇದೇ ವೇಳೆ ಯುವತಿಯ ಮನೆಯವರು ಬೇರೊಂದು ವರನೊಂದಿಗೆ ಮದುವೆಗೆ ನಿಶ್ಚಯಿಸಿದ್ದರು. ಯುವತಿ ಎಷ್ಟೇ ಬೇಡಿಕೊಂಡರೂ ಒಪ್ಪಿರಲಿಲ್ಲ.
									
										
								
																	ಅದು ಹೇಗೋ ತನ್ನ ಪ್ರಿಯತಮೆಯ ಮದುವೆ ವಿಚಾರ ತಿಳಿದು ಮಂಟಪಕ್ಕೇ ಬಂದ ಪ್ರಿಯಕರ ಶಾಸ್ತ್ರಗಳು ಶುರುವಾಗುವ ಮೊದಲೇ ಹಣೆಗೆ ಸಿಂಧೂರ ಇಟ್ಟಿದ್ದಾನೆ. ಇದರಿಂದಾಗಿ ಯುವತಿ ಮನೆಯವರು ಪ್ರಿಯಕರನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರ ಮಧ್ಯಪ್ರವೇಶದಿಂದ ಆತನನ್ನು ಅಲ್ಲಿಂದ ಕಳುಹಿಸಿ ಮತ್ತೆ ತಾವು ನಿಶ್ಚಯಿಸಿದ ಹುಡುಗನ ಜೊತೆಗೇ ಯುವತಿಯ ಮದುವೆ ಮಾಡಿದ್ದಾರೆ.