ತಾಯಿಯ ಮೇಲೆ ಅತ್ಯಾಚಾರ ಎಸಗಿದ ಪಾಪಿ ಮಗ

ಗುರುವಾರ, 6 ಸೆಪ್ಟಂಬರ್ 2018 (07:10 IST)
ಭೋಪಾಲ್ : ತಂದೆ ಮಗಳ ಮೇಲೆ, ಅಣ್ಣ ತಂಗಿಯ ಮೇಲೆ ಅತ್ಯಾಚಾರ ಎಸಗಿದ ಹೀನ ಕೃತ್ಯಗಳನ್ನು ನಾವು  ಸಾಕಷ್ಟು ಬಾರೀ ಕೇಳಿದ್ದೇವೆ. ಆದರೆ ಹೆತ್ತ ತಾಯಿಯ ಮೇಲೆ ಮಗನೇ ಅತ್ಯಾಚಾರ ಎಸಗಿದಂತಹ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಬರ್ವಾನಿ ಜಿಲ್ಲೆಯ ಸುರನಿ ಗ್ರಾಮದಲ್ಲಿ ನಡೆದಿದೆ.


ಈ ಘಟನೆ ಸೆಪ್ಟಂಬರ್ 2ರಂದು ನಡೆದಿದ್ದು, ತಾಯಿ ಮನೆಯಲ್ಲಿ ಮಲಗಿದ್ದ ವೇಳೆ ಪಾಪಿ ಮಗ ಆಕೆಯ ಮೇಲೆ ಮೇಲೆರಗಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆರೋಪಿ ತಾಯಿಯ ಕುತ್ತಿಗೆಗೆ ಕುಡುಗೋಲು ಹಾಕಿ ಅತ್ಯಾಚಾರ ಎಸಗಿದ್ದಾನೆ.


ಸಂತ್ರಸ್ತೆ ಕಾಮುಕ ಮಗನಿಂದ ತಪ್ಪಿಸಿಕೊಂಡು ತನ್ನ ಮೂವರು ಮೊಮ್ಮಕ್ಕಳೊಂದಿಗೆ ಸಂಬಂಧಿಕರ ಮನೆಗೆ ಬಂದಿದ್ದಾರೆ. ಬಳಿಕ ಅವರ ಸಹಾಯ ಪಡೆದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ: ಅವ್ಯವಹಾರ ತನಿಖೆಗೆ ಆಗ್ರಹ