Publish Date: Mon, 03 Sep 2018 (12:34 IST)
Updated Date: Mon, 03 Sep 2018 (12:36 IST)
ಬೆಂಗಳೂರು : ನಿದ್ದೆಯಲ್ಲಿ ಕನಸು ಬೀಳುವುದು ಎಲ್ಲರಿಗೂ ಸರ್ವೇ ಸಾಮಾನ್ಯ. ನಮ್ಮ ಹಿಂದಿನ ಪೂರ್ವಜರು ಹೇಳುವ ಪ್ರಕಾರ ಕನಸು ಬೀಳುವುದು ನಮ್ಮ ಜೀವನದ ಭವಿಷ್ಯದಲ್ಲಾಗುವ ಶುಭ ಮತ್ತು ಅಶುಭ ಸೂಚನೆಯನ್ನು ನೀಡುತ್ತದೆ. ಆದರೆ ಮುಖ್ಯವಾಗಿ ಪುರುಷರ ಕನಸಿನಲ್ಲಿ ಮಹಿಳೆಯರು ಕಾಣಿಸಿಕೊಂಡರೆ ಆಗುವ ಮುನ್ಸೂಚನೆ ಏನು ಎಂಬುದು ಇಲ್ಲಿದೆ ನೋಡಿ.
*ಕನಸಿನಲ್ಲಿ ಬಿಳಿ ವರ್ಣದ ಮಹಿಳೆ ಕಾಣಿಸಿಕೊಂಡರೆ ನಿಮ್ಮನ್ನು ಆಕರ್ಷಿಸುವಂತಿದ್ದರೆ, ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವಿದಾಯ ಹೇಳಿದಂತೆ ಕಂಡರೆ, ಪಿತ್ರಾರ್ಜಿತ ಆಸ್ತಿ ಸಿಗುತ್ತದೆ ಎಂದು ಸೂಚಿಸಿದಂತೆ
*ಕನಸಿನಲ್ಲಿ ಮಹಿಳೆ ಆಡುವಂತೆ ಅಂದರೆ ನಿಮ್ಮೊಂದಿಗೆ ಚೆಸ್ ಆಟವಾಡುತ್ತಿದ್ದಂತೆ ಕಂಡರೆ ನಿಮ್ಮ ಭವಿಷ್ಯದಲ್ಲಿ ನೀವುಗಳಿಸಿದ ಹೆಸರು,ಖ್ಯಾತಿ ಮಣ್ಣಲ್ಲಿ ಮಣ್ಣಾಗಿ ಹಾಳಾಗಿ ಹೋಗುವುದನ್ನು ಸೂಚಿಸುತ್ತದೆ.
*ಕನಸಿನಲ್ಲಿ ಮದುಮಗಳು ಅತ್ತಂತೆ ಕನಸು ಬಿದ್ದರೆ ಅತ್ತಿಗೆ ಅಥವಾ ಸಹೋದರ ಸಹೋದರಿಯರ ಜೊತೆ ವೈಮನಸ್ಸು ಉಂಟಾಗುತ್ತದೆ ಎಂದು ಸೂಚಿಸುತ್ತದೆ
*ಗಂಡಸರ ಕನಸಲ್ಲಿ ಯಕ್ಷಿಣಿ ಬಂದಂತೆ ಕಂಡರೆ, ಹೆಚ್ಚು ಕೆಲಸ ಮಾಡದೆಯೇ ಶ್ರೀಮಂತನಾಗುವನು ಎನ್ನುವುದನ್ನು ತಿಳಿಸುತ್ತದೆ.
*ಹೆಂಡತಿ ಅಥವಾ ಮದುವೆಯಾಗುವ ಹುಡುಗಿಯ ಜೊತೆ ಪ್ರವಾಸ ಹೋದಂತೆ ಕಂಡರೆ, ವೈವಾಹಿಕ ಜೀವನವು ಯಶಸ್ವಿಯಾಗಿರುತ್ತದೆ ಎನ್ನುವುದನ್ನು ಸೂಚಿಸುವುದು.
*ಬಿಳಿ ಬಟ್ಟೆಯನ್ನು ಧರಿಸುವ ಸುಂದರವಾದ ಮಹಿಳೆ ನಿದ್ದೆಯಲ್ಲಿ ನಿಮ್ಮನ್ನು ತಬ್ಬಿಕೊಂಡಂತೆ ಕಂಡರೆ, ನೀವು ಬಹಳ ಅದೃಷ್ಟವಂತರು ಎನ್ನುವುದನ್ನು ತಿಳಿಸುತ್ತದೆ.
*ಕನಸಿನಲ್ಲಿ ಪ್ರೇಯಸಿಗೆ ವಜ್ರದ ಒಡವೆ ಉಡುಗೊರೆಯಾಗಿ ನೀಡುವಂತೆ ಕಂಡರೆ ವೈವಾಹಿಕ ಜೀವನದಲ್ಲಿ ಸಂಘರ್ಷ ಹೆಚ್ಚಾಗುತ್ತದೆ. ಜೀವನದಲ್ಲಿ ಹಣಕಾಸಿನ ತೊಂದರೆ ಉಂಟಾಗುತ್ತದೆ. ನಷ್ಟ ಅನುಭವಿಸಬೇಕಾಗುತ್ತದೆ.
*ನಿಮ್ಮ ಕನಸಲ್ಲಿ ನೀವು ಮಹಿಳೆಯ ನಗ್ನ ಚಿತ್ರವನ್ನು ಬಿಡಿಸುತ್ತಿದ್ದಂತೆ ಕಂಡರೆ, ನಿಮಗೆ ಆಪತ್ಕಾಲ ಬಂತು ಎಂದೇ ಅರ್ಥ. ಅದರಲ್ಲೂ ನಗ್ನವಾಗಿ ಮಹಿಳೆ ಕಂಡರೆ ನಿಮ್ಮ ಮುಂದಿನ ಬದುಕು ಮಹಿಳೆಯಿಂದಲೆ ಚಿಂದಿ ಯಾಗುತ್ತದೆ ಎಂದು ಸೂಚಿಸುತ್ತದೆ. ಸ್ವಲ್ಪ ಮಹಿಳೆಯರಿಂದ ದೂರ ಉಳಿಯುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ