Select Your Language

Notifications

webdunia
webdunia
webdunia
webdunia

ನೀವು ಋಣ ಮುಕ್ತರಾಗಬೇಕಾ? ಹಾಗಾದ್ರೆ ಈ ನಿಯಮಗಳನ್ನು ಅನುಸರಿಸಿ

ನೀವು ಋಣ ಮುಕ್ತರಾಗಬೇಕಾ? ಹಾಗಾದ್ರೆ ಈ ನಿಯಮಗಳನ್ನು ಅನುಸರಿಸಿ
ಬೆಂಗಳೂರು , ಶನಿವಾರ, 1 ಸೆಪ್ಟಂಬರ್ 2018 (16:54 IST)
ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ರೀತಿಯಲ್ಲಿ ಇನ್ನೊಬ್ಬರ ಋಣದಲ್ಲಿರುತ್ತಾರೆ. ಆದರೆ ನಂತರ ಅವರ ಋಣವನ್ನು ತೀರಿಸಲು ಆಗದೆ ಒದ್ದಾಡುತ್ತಿರುತ್ತಾರೆ. ಅಂತವರು ಚಿಂತೆ ಮಾಡದೇ ಈ ನಿಯಮಗಳನ್ನು ಅನುಸರಿಸಿದರೆ ಋಣದಿಂದ ಮುಕ್ತರಾಗಬಹುದು.


*ಮೊದಲು ಭಗವತಿ ಶ್ರೀ ಲಕ್ಷ್ಮೀದೇವಿಯ ಪೂಜೆ ಮಾಡಿ ಅವಳ ಆರ್ಶಿವಾದ ತೆಗೆದುಕೊಳ್ಳಬೇಕು.


* ಪ್ರತಿದಿನ ಮುಂಜಾನೆ ಸ್ನಾನ ಮಾಡಿ ಶುದ್ದವಾದ ನಂತರ ಒಂದು ಲೋಟ ನೀರನ್ನು ಅಶ್ವತ್ಥ ಮರಕ್ಕೆ ಹಾಕುತ್ತ ಬರಬೇಕು


* ಎಲ್ಲಿಯಾದರೂ ನವಿಲು ಕುಣಿಯುವುದು ಕಂಡುಬಂದರೆ ಆ ಸ್ಥಳದ ಮಣ್ಣನ್ನು ತಂದು ಲಕ್ಷ್ಮೀದೇವಿಯ ಸ್ಮರಣೆ ಮಾಡಿ ಒಂದು ಕೆಂಪು ರೇಷ್ಮೆವಸ್ತ್ರದಲ್ಲಿ ಕಟ್ಟಿ ಪೂಜಿಸಬೇಕು.


* ಭೋಜನ ತಯಾರಿಸುವಾಗ ಮೊದಲು ತಯಾರಿಸಿದ ರೊಟ್ಟಿಯನ್ನು ಹಸುವಿಗಾಗಿ ಮತ್ತು ಕೊನೆಯಲ್ಲಿ ತಯಾರಿಸಿದ ರೊಟ್ಟಿಯನ್ನು ನಾಯಿಗೆ ತಿನ್ನಿಸಬೇಕು.


* ಹರಿದು ಹೋದ ಬಟ್ಟೆಗಳನ್ನು ಮನೆಯವರು ತೊಡಬಾರದು ಮತ್ತು ಯಾವುದೇ ಕಾರಣಕ್ಕು ಹರಿದ ಬಟ್ಟೆಯನ್ನು ದಾನ ಮಾಡಬಾರದು.


* ಸಣ್ಣ ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಸಿಹಿ ತಿಂಡಿಗಳನ್ನು ಪ್ರತಿ ಶುಕ್ರವಾರ ಕೊಡುತ್ತಬರಬೇಕು.


* ಯಾವುದೇ ವಸ್ತುವನ್ನು ದಾನ ಕೊಡಬೇಕಾದರೆ, ದಾನ ತೆಗೆದು ಕೊಳ್ಳುವವರನ್ನು ಒಳಗೆ ಕರೆಯದೆ ಪ್ರವೇಶದ್ವಾರದ ಹೊರಗೆ ನಿಲ್ಲಿಸಿ ಕೊಡಬೇಕು.


* ಸಾಧ್ಯವಾದರೆ ಪ್ರತೀ ಶುಕ್ರವಾರ ಶ್ರೀಸೂಕ್ತ ಅಥವಾ ಲಕ್ಮ್ಮೀ ಸೂಕ್ತ ಮತ್ತು ಲಕ್ಷ್ಮೀ ಅಷ್ಚೋತ್ತರ ಹೇಳಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಮೆಯ ಮೂರ್ತಿಯನ್ನು ಅಪ್ಪಿ ತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ಮಾತ್ರ ಇಡಬೇಡಿ