Select Your Language

Notifications

webdunia
webdunia
webdunia
webdunia

ಹಾಲು ಶುದ್ಧವೇ? ಕಲಬೆರಕೆಯೇ ಎಂದು ಪರೀಕ್ಷಿಸುವುದು ಹೇಗೆ ಗೊತ್ತಾ?

ಹಾಲು ಶುದ್ಧವೇ? ಕಲಬೆರಕೆಯೇ ಎಂದು ಪರೀಕ್ಷಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಶುಕ್ರವಾರ, 31 ಆಗಸ್ಟ್ 2018 (14:36 IST)
ಬೆಂಗಳೂರು : ಹಾಲು ಯಾವತ್ತೂ ಕಲಬೆರಕೆಯಾಗಿರುವುದಿಲ್ಲ, ಶುದ್ಧವಾಗಿಯೇ ಇರುತ್ತದೆ ಎಂಬ ನಂಬಿಕೆ ಈಗ ಹುಸಿಯಾಗುತ್ತಿದೆ. ಯಾಕೆಂದರೆ ಕೆಲವು ಹಾಲಿನ ವ್ಯಾಪಾರಿಗಳು, ಕಂಪೆನಿಗಳು ಹಾಲಿಗೆ ಕೆಲವು ರಾಸಾಯನಿಕ ವಸ್ತುಗಳನ್ನು ಬೆರೆಸಿ ಮಾರಾಟ ಮಾಡುತ್ತವೆ. ಹಾಗಾದರೆ ನೀವು ಕೊಳ್ಳುವ ಹಾಲು ಶುದ್ಧವೇ ಅಥವಾ ಕಲಬೆರಕೆ ಆಗಿದೆಯೇ ಎಂದು ಹೇಗೆ ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಕೆಲವು ಸರಳ ವಿಧಾನಗಳು


*ಹಾಲಿನ ಪ್ರಮಾಣ ಜಾಸ್ತಿ ಮಾಡಲು ವ್ಯಾಪಾರಿಗಳು ಅದಕ್ಕೆ ನೀರು ಸೇರಿಸುತ್ತಾರೆ. ಇದನ್ನು ಪರೀಕ್ಷಿಸಲು ನೀವು ಒಂದು ಹನಿ ಹಾಲನ್ನು ಸಮತಟ್ಟಾದ ಪ್ಲೇಟ್‌ಗೆ ಹಾಕಿ. ಅದು ಉದ್ದಕ್ಕೆ ಹರಿಯಲು ಆರಂಭಿಸಿದರೆ ಅದಕ್ಕೆ ನೀರು ಬೆರೆಸಿದ್ದಾರೆ ಎಂದು ತಿಳಿದು ಬರುತ್ತದೆ.


*ಹಾಲು ಕೆಟ್ಟ ವಾಸನೆ ಅಥವಾ ರುಚಿ ಹೊಂದಿದ್ದರೆ ಅದು ಸಿಂಥೆಟಿಕ್‌ ಹಾಲು ಎಂದು ಸುಲಭವಾಗಿ ಊಹಿಸಬಹುದು. ಆದ್ದರಿಂದ ಹಾಲನ್ನು ಯಾವಾಗಲೂ ಮೂಸಿ ನೋಡಿ. ಸಾಬೂನಿನ ವಾಸನೆ ಬಂದರೆ ಅದನ್ನು ಬೆರಳಲ್ಲಿ ಉಜ್ಜಿ ಪರೀಕ್ಷಿಸಿ. ಆಗ ನೊರೆ ಬಂದರೆ ಅದರಲ್ಲಿ ರಾಸಾಯನಿಕ ವಸ್ತು ಮಿಶ್ರವಾಗಿದೆ ಎಂದು ಅರ್ಥ.


*ಕೆಲವು ಸ್ಥಳೀಯ ಹಾಲು ವ್ಯಾಪಾರಿಗಳು ಹಾಲಿಗೆ ಸ್ಟಾರ್ಚ್‌ ಬೆರೆಸಿರುವ ಸಾಧ್ಯತೆ ಇರುತ್ತದೆ. ಇದನ್ನು ಪರೀಕ್ಷಿಸಲು ಒಂದು ಚಮಚ ಹಾಲಿಗೆ ಎರಡು ಟೇಬಲ್‌ ಸ್ಪೂನ್‌ ಉಪ್ಪು ಬೆರೆಸಿ. ಈ ಮಿಶ್ರಣ ನೀಲಿ ಬಣ್ಣಕ್ಕೆ ತಿರುಗಿದರೆ ಹಾಲಿಗೆ ಸ್ಟಾರ್ಚ್‌ ಬೆರೆಸಿದ್ದಾರೆ ಎಂದು ಅರ್ಥ.


*ಶುದ್ಧ ಹಾಲು ಸಿಹಿಯಾಗಿರುತ್ತದೆ. ಫ್ರಿಜ್‌ನಲ್ಲಿಟ್ಟ ಹಾಲು ಕಹಿ ಅಥವಾ ಹುಳಿ ರುಚಿಯಾದರೆ ಅದಕ್ಕೆ ಯಾವಾದರೂ ಡಿಟರ್ಜಂಟ್‌ ಅಥವಾ ಸೋಡ ಬೆರೆಸಿದ್ದಾರೆ ಎಂದು ತಿಳಿದುಕೊಳ್ಳಿ.


*ಕೆಲವರು ಹಾಲಿಗೆ ಯೂರಿಯ ಹಾಕಿ ಮಾರುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದನ್ನು ಪರೀಕ್ಷಿಸಲು ಒಂದು ಚಮಚ ಹಾಲಿಗೆ ಸ್ವಲ್ಪ ಸೋಯಾಬೀನ್‌ ಪುಡಿ ಹಾಕಿ ಚೆನ್ನಾಗಿ ಅಲುಗಾಡಿಸಿ. ಇದಕ್ಕೆ ಲಿಟ್ಮಸ್‌ ಕಾಗದವನ್ನು ಹಾಕಿ ತೆಗೆಯಿರಿ. ಕೆಂಪು ಲಿಟ್ಮಸ್‌ ಕಾಗದದ ಬಣ್ಣ ನೀಲಿಗೆ ತಿರುಗಿದರೆ ಹಾಲಿನಲ್ಲಿ ಯೂರಿಯ ಇದೆ ಎಂದರ್ಥ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಬಾಯಿ ನೀರೂರಿಸುವ ಗೋಳಿಬಜ್ಜಿ