Publish Date: Fri, 31 Aug 2018 (07:08 IST)
Updated Date: Fri, 31 Aug 2018 (07:10 IST)
ಬೆಂಗಳೂರು : ‘ಯಜಮಾನ’ ಸಿನಿಮಾದ ಚಿತ್ರೀಕರಣದ ವೇಳೆ ಜೂನಿಯರ್ ಕಲಾವಿದನ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದು ಈ ಬಗ್ಗೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.
ದೊಡ್ಡ ಮೊತ್ತದ ಬಂಡವಾಳ ಹಾಕಿ ನಿರ್ಮಿಸುತ್ತಿರುವ ನಟ ದರ್ಶನ್ ಅವರ ‘ಯಜಮಾನ’ ಸಿನಿಮಾದ ಚಿತ್ರೀಕರಣದ ವೇಳೆ ಜೂನಿಯರ್ ಕಲಾವಿದನೊಬ್ಬ ಶೂಟಿಂಗ್ ಸೆಟ್ ನ ಫೋಟೋ ತೆಗೆಯುತ್ತಿರುವಾಗ ನಟ ದರ್ಶನ್ ಹೀಗೆ ಮಾಡುವುದು ಸರಿಯಲ್ಲ ಅಂತಾ ತಿಳಿ ಹೇಳಿದ್ದರಂತೆ. ಆದರೆ ಜೂನಿಯರ್ ಕಲಾವಿದ ಮಾತ್ರ ದರ್ಶನ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿರುವ ನಟ ದರ್ಶನ್, ‘ಸಾರ್ವಜನಿಕ ಸ್ಥಳದಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ಫೋಟೋ ತೆಗೆಯಲು ಬೇಡಾ ಅಂತಾ ಹೇಳುವುದಕ್ಕೆ ಬರುವುದಿಲ್ಲ. ಆದರೆ ಖಾಸಗಿ ಜಾಗದಲ್ಲಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಚಿತ್ರೀಕರಣ ಮಾಡುತ್ತಿದ್ದಾಗ ಒಬ್ಬ ಜೂನಿಯರ್ ಕಲಾವಿದ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಲೈಕ್, ಕಮೆಂಟ್ಸ್ ತಗೊಂಡರೆ ಚಿತ್ರಮಂದಿರಕ್ಕೆ ಬಂದು ಜನ ಸಿನಿಮಾ ನೋಡುತ್ತಾರಾ? ಇದರಿಂದ ನಿರ್ಮಾಪಕರ ಕಥೆ ಏನಾಗುತ್ತದೆ? ಹೀಗೆ ಮಾಡುವುದು ಸರಿಯಲ್ಲ ಅಂತಾ ತಿಳಿ ಹೇಳಿದೆ. ತಪ್ಪು ಮಾಡಿದರೆ ಕೇಳುವುದೇ ತಪ್ಪಾ ಅಂತಾ ದರ್ಶನ್ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.