Select Your Language

Notifications

webdunia
webdunia
webdunia
webdunia

ಕಪ್ ಗಳಲ್ಲಿ ಉಳಿದುಕೊಂಡಿರುವ ಕಾಫಿ, ಟೀ ಕಲೆಗಳನ್ನು ಹೋಗಲಾಡಿಸಲು ಇದನ್ನು ಬಳಸಿ

ಕಪ್ ಗಳಲ್ಲಿ ಉಳಿದುಕೊಂಡಿರುವ ಕಾಫಿ, ಟೀ ಕಲೆಗಳನ್ನು ಹೋಗಲಾಡಿಸಲು ಇದನ್ನು ಬಳಸಿ
ಬೆಂಗಳೂರು , ಗುರುವಾರ, 30 ಆಗಸ್ಟ್ 2018 (08:08 IST)
ಬೆಂಗಳೂರು : ಕಾಫಿ, ಟೀ ಕಲೆಗಳು ಯಾವುದರ ಮೇಲೆ ಬಿದ್ದರೂ ಸುಲಭವಾಗಿ ಹೋಗುವುದಿಲ್ಲ. ಟೀ ಹಾಕುವ ಲೋಟ, ಕಪ್, ಸಾಸರ್ ಗಳನ್ನು ಕೂಡ ಎಷ್ಟೇ ತೊಳೆದರೂ ಕಂದು ಬಣ್ಣದ ಕಲೆಗಳು ಹಾಗೆಯೇ ಉಳಿದುಬಿಡುತ್ತದೆ. ಹಾಗಾಗಿ ಯಾರಾದರೂ ಅತಿಥಿಗಳು ಬಂದಾಗ ಈ ಕಪ್ ಗಳಲ್ಲಿ ಅವರಿಗೆ ಕಾಫಿ ಕೊಡಲು ಮುಜುಗರವಾಗುತ್ತದೆ. ಇಂಥ ಹಟಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿದೆ ನೋಡಿ ಕೆಲವು ಟಿಪ್ಸ್

*ಬೇಕಿಂಗ್ ಸೋಡಾ ಅಥವಾ ವಿನಿಗರ್ ಬೆರೆಸಿದ ಬಿಸಿ ನೀರಿನಲ್ಲಿ ಕಲೆಯಾಗಿರುವ ಕಪ್ ಗಳನ್ನು ನೆನೆಸಿಟ್ಟು ನಂತರ ತೊಳೆದರೂ ಕಲೆಗಳು ನಿವಾರಣೆಯಾಗುತ್ತವೆ.

 

*ಒದ್ದೆ ಬಟ್ಟೆಯನ್ನು ಉಪ್ಪಿನಲ್ಲಿ ಅದ್ದಿ ಕಾಫಿ ಅಥವಾ ಚಹಾ ಕಲೆಯನ್ನು ಒರೆಸಿದರೆ ಅವು ಮರೆಯಾಗುತ್ತವೆ.

 

*ಬಿಸಿನೀರಿಗೆ ಅರ್ಧ ಕಪ್ ನಿಂಬೆರಸ ಸೇರಿಸಿ ಅದರಲ್ಲಿ ಕಲೆಗಳಿರುವ ಕಪ್ ಗಳನ್ನು ಒಂದು ರಾತ್ರಿ ನೆನೆಸಿಟ್ಟು ಮರುದಿನ ತೊಳೆದರೆ ಕಲೆಗಳು ಮಾಯವಾಗುತ್ತವೆ.

 

*ಬೇಕಿಂಗ್ ಸೋಡಾ ಮತ್ತು ನಿಂಬೆರಸ ಬೆರೆಸಿ ಕಲೆಯ ಮೇಲೆ ಹಚ್ಚಿ ಒರೆಸಿದರೂ ಈ ಕಲೆಗಳು ನಿವಾರಣೆಯಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕರ ಕೋಕಂ ಲಾಭಗಳು