ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ‘ಬೂಮ್ ಬೂಮ್ ಅಫ್ರಿದಿ’ ಎಂದು ಹೆಸರಿಟ್ಟವರು ಯಾರು ಗೊತ್ತೇ?

ಬುಧವಾರ, 29 ಆಗಸ್ಟ್ 2018 (09:14 IST)
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬೂಮ್ ಬೂಮ್ ಅಫ್ರಿದಿ ಎಂದೇ ಕ್ರಿಕೆಟ್ ಜಗತ್ತಿನಲ್ಲಿ ಜನಪ್ರಿಯ. ಹಾಗಿದ್ದರೆ ಅವರಿಗೆ ಈ ಹೆಸರನ್ನು ಕೊಟ್ಟವರು ಯಾರು ಗೊತ್ತೇ?

ಬೇರಾರೂ ಅಲ್ಲ. ಟೀಂ ಇಂಡಿಯಾ ಮಾಜಿ ಕ್ರಿಕೆಟ್, ಹಾಲಿ ಕೋಚ್ ರವಿಶಾಸ್ತ್ರಿ! ಹಾಗಂತ ಸ್ವತಃ ಅಫ್ರಿದಿ ಈಗ ಬಹಿರಂಗಪಡಿಸಿದ್ದಾರೆ.

ತಮ್ಮ ಅಭಿಮಾನಿಗಳೊಂದಿಗೆ ಟ್ವಿಟರ್ ನಲ್ಲಿ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದ ಅಫ್ರಿದಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಅಭಿಮಾನಿಯೊಬ್ಬರು ನಿಮಗೆ ಬೂಮ್ ಬೂಮ್ ಎಂದು ಹೆಸರು ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದರು. ಇದಕ್ಕೆ ಅಫ್ರಿದಿ ‘ರವಿಶಾಸ್ತ್ರಿ’ ಎಂದು ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ವೃತ್ತಿಜೀವನದ ಮೆಚ್ಚಿನ ಶತಕ ದಾಖಲಿಸಿದ್ದೂ ಭಾರತದ ವಿರುದ್ಧ ಎಂದು ಇನ್ನೊಬ್ಬ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಏಷ್ಯನ್ ಗೇಮ್ಸ್ ಚಿನ್ನ ಗೆದ್ದು ಬಂದ ವಿನೇಶ್ ಪೋಗಟ್ ಗೆ ಏರ್ ಪೋರ್ಟ್ ನಲ್ಲೊಂದು ಸರ್ಪ್ರೈಸ್!