ಎಂಎಸ್ ಧೋನಿಗೆ ಬಾಲಿವುಡ್ ನ ಈ ಸಿನಿಮಾವನ್ನು ನೋಡುವ ಆಸೆಯಾಗಿದೆಯಂತೆ!

ಮಂಗಳವಾರ, 28 ಆಗಸ್ಟ್ 2018 (07:39 IST)
ಮುಂಬೈ : ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಬಾಲಿವುಡ್ ನ ಲವ್ ಸ್ಟೋರಿ ಸಿನಿಮಾವೊಂದನ್ನು ನೋಡುವ ಆಸೆಯಾಗಿದೆಯಂತೆ.


ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಬಾಮೈದ ನಟ ಆಯುಷ್ ಶರ್ಮಾ ಅವರಿಗಾಗಿ ‘ಲವ್ ರಾತ್ರಿ’ ಸಿನಿಮಾ ನಿರ್ಮಾಣ ಮಾಡಿದ್ದು, ಅಭಿರಾಜ್ ಮಿನಾವಾಲಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ಈ  ಟ್ರೈಲರ್ ನೋಡಿದ ಧೋನಿ ಅವರು ಫಿದಾ ಆಗಿದ್ದಾರಂತೆ.


ಹಾಗಾಗಿ ಚಿತ್ರದ ಪ್ರಮೋಶನ್ಸ್ ಗಾಗಿ ಕೋಲ್ಕತ್ತಾಗೆ ಚಿತ್ರದ ನಾಯಕ  ಆಯೂಶ್ ಶರ್ಮಾ ಮತ್ತು ನಾಯಕಿ ವರಿನಾ ಹುಸೇನ್ ಬಂದಾಗ  ಅವರನ್ನು ಧೋನಿ ಮನೆಗೆ ಊಟಕ್ಕೆ ಕರೆದು ಕೆಲ ಸಮಯ ಕಾಲ ಕಳೆದಿದ್ದಾರೆ. ಇನ್ನು ಚಿತ್ರದ ಟ್ರೈಲರ್ ನೋಡಿ ಖುಷಿಯಾಯಿತು. ಚಿತ್ರವನ್ನು ನೋಡುವ ಬಯಕೆಯಾಗಿದೆ ಎಂದು ಎಂಎಸ್ ಧೋನಿ ಅವರು ಹೇಳಿರುವುದಾಗಿ ಆಯೂಶ್ ಶರ್ಮಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರಿಂದ ಚಂದನ್ ಶೆಟ್ಟಿಗೆ ನೋಟಿಸ್!