Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್ ಕೇರಳ ಪ್ರವಾಹ ನಿಧಿಗೆ 5 ಕೋಟಿ ನೀಡಿಲ್ಲವೆಂದಾದರೆ ಹಾಗಾದ್ರೆ ಕೊಟ್ಟಿದೇನು?

ಸನ್ನಿ ಲಿಯೋನ್ ಕೇರಳ ಪ್ರವಾಹ ನಿಧಿಗೆ 5 ಕೋಟಿ ನೀಡಿಲ್ಲವೆಂದಾದರೆ ಹಾಗಾದ್ರೆ ಕೊಟ್ಟಿದೇನು?
ಮುಂಬೈ , ಶನಿವಾರ, 25 ಆಗಸ್ಟ್ 2018 (14:01 IST)
ಮುಂಬೈ : ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳ ಪ್ರವಾಹಕ್ಕೆ 5 ಕೋಟಿ ನೀಡಿದ್ದಾರೆ ಎಂಬ ಸುದ್ದಿ ಈಗಾಗಲೇ ಸಾಕಷ್ಟು ಬಾರಿ ಕೇಳಿಬಂದಿತ್ತು. ಆದರೆ ಆ ಸುದ್ದಿ ಇದೀಗ ಸುಳ್ಳು ಎಂಬುದಾಗಿ ತಿಳಿದುಬಂದಿದೆ.


ಕೇರಳದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಇಡೀ ಕೇರಳವೇ ಕೊಚ್ಚಿ ಹೋಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಕೇರಳದ ಜನತೆಗೆ ಕೆಲವು ನಟ, ನಟಿಯರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಅದೇರೀತಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳ ಪ್ರವಾಹಕ್ಕೆ 5 ಕೋಟಿ ನೀಡಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಈ ಸುದ್ದಿ ಸುಳ್ಳಂತೆ.


ಹಾಗಾದ್ರೆ ನಟಿ ಸನ್ನಿ ಲಿಯೋನ್ ಪ್ರವಾಹ ಸಂತ್ರಸ್ತರಿಗೆ ನೀಡಿದ್ದಾರೂ ಏನು ಗೊತ್ತಾ? 1200 ಕೆಜಿ ಆಹಾರ ಸಾಮಗ್ರಿಗಳು.
ಹೌದು. ಇದಕ್ಕೆ ಸಂಬಂಧಪಟ್ಟ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿಕೊಂಡಿರುವ ಸನ್ನಿ ಮಾನವೀಯತೆಗಿಂತ ದೊಡ್ಡದು ಬೇರೆ ಇಲ್ಲ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಬಿಪಾಶಾ ಬಸುವಿನ ಈ ಫೋಟೊ ನೋಡಿದ್ರೆ ಹುಡುಗರ ಎದೆಯಲ್ಲಿ ಕಚಗುಳಿಯಿಟ್ಟಂತೆ ಆಗುತ್ತೆ!