ಲಂಡನ್: ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯವನ್ನು ಗೆದ್ದ ವಿರಾಟ್ ಕೊಹ್ಲಿ ಬಳಗಕ್ಕೆ ಮೆಚ್ಚುಗೆ ಸೂಚಿಸಿರುವ ಇಂಗ್ಲೆಂಡ್ ಮಾಜಿ ನಾಯಕ ರೇ ಇಲ್ಲಿಂಗ್ ವರ್ತ್ ಅಭಿಪ್ರಾಯಪಟ್ಟಿದ್ದಾರೆ.
ಈ ಮಾಜಿ ನಾಯಕನ ಪ್ರಕಾರ ಟೀಂ ಇಂಡಿಯಾ ಮೂರನೇ ಟೆಸ್ಟ್ ನಲ್ಲಿ ಗೆದ್ದ ರೀತಿ ಮೆಚ್ಚುವಂತದ್ದಂತೆ. ಹಾಗೆಯೇ ವಿರಾಟ್ ಕೊಹ್ಲಿ ಪರಿಸ್ಥಿತಿಗೆ ತಕ್ಕಂತೆ ತಮ್ಮ ಬ್ಯಾಟಿಂಗ್ ಶೈಲಿ ಬದಲಾಯಿಸಿಕೊಳ್ಳುವ ಗುಣ ಅತ್ಯುತ್ತಮವಾದದ್ದಂತೆ.
ಅದೇ ರೀತಿ ಟೀಂ ಇಂಡಿಯಾ ನಾಯಕನಿಗಾಗಿಯೇ ಹೋರಾಡುವ, ಅವರನ್ನು ಬೆಂಬಲಿಸುವ, ಅವರು ಏನೇ ಹೇಳಿದರೂ ಮಾಡುವ ಕೆಲವು ಆಟಗಾರರ ಗುಂಪೇ ತಂಡದಲ್ಲಿದೆ. ಅದೇ ಕಾರಣಕ್ಕೆ ಕೊಹ್ಲಿಗೆ ಯಶಸ್ಸು ಸಾಧ‍್ಯವಾಗುತ್ತಿದೆ ಎನ್ನುವುದು ರೇ ಇಲ್ಲಿಂಗ್ ವರ್ತ್ ಅಭಿಪ್ರಾಯವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.