ಏಷ್ಯನ್ ಗೇಮ್ಸ್ ಚಿನ್ನ ಗೆದ್ದು ಬಂದ ವಿನೇಶ್ ಪೋಗಟ್ ಗೆ ಏರ್ ಪೋರ್ಟ್ ನಲ್ಲೊಂದು ಸರ್ಪ್ರೈಸ್!

ಬುಧವಾರ, 29 ಆಗಸ್ಟ್ 2018 (09:05 IST)
ನವದೆಹಲಿ: ಭಾರತಕ್ಕೆ ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಮಹಿಳೆಯ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದು ಕೀರ್ತಿ ತಂದ ವಿನೇಶ್ ಪೋಗಟ್ ಗೆ ತವರಿಗೆ ಬಂದಿಳಿದ ತಕ್ಷಣ ಅಚ್ಚರಿಯೊಂದು ಕಾದಿತ್ತು.

ಚಿನ್ನದ ಹುಡುಗಿ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ವಿನೇಶ್ ಬಂದಿಳಿಯುತ್ತಿದ್ದಂತೆ ಅವರ ಕುಟುಂಬ ಜತೆಗೆ ಗೆಳೆಯ ಸೋಮವೀರ್ ರಾಠಿ ಹಾರ-ತುರಾಯಿ, ಕೇಕ್ ಜತೆಗೆ ಕಾದು ನಿಂತಿದ್ದರು. ಇದು ಅಂತಿಂಥಾ ಸ್ವಾಗತವಾಗಿರಲಿಲ್ಲ.

ವಿಮಾನ ನಿಲ್ದಾಣದಲ್ಲೇ ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಡೆಸಲು ಎರಡೂ ಕುಟುಂಬಗಳು ತಯಾರಿ ನಡೆಸಿಕೊಂಡೇ ಬಂದಿದ್ದವು. ಹೀಗಾಗಿ ವಿನೇಶ್ ಬಂದಿಳಿಯುತ್ತಿದ್ದಂತೆ ಎಂಗೇಜ್ ಮೆಂಟ್ ರಿಂಗ್ ಬದಲಾಯಿಸಿಕೊಂಡ ಜೋಡಿ, ಕೇಕ್ ಕಟ್ ಮಾಡಿ ವಿಶಿಷ್ಟವಾಗಿ ತಮ್ಮ ವಿವಾಹ ನಿಶ್ಚಿತಾರ್ಥ ಮಾಡಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಮ್ಮದೇ ನಾಡಿನ ಪಿವಿ ಸಿಂಧು ಸಾಧನೆ ನೋಡಿ ಸಾನಿಯಾ ಮಿರ್ಜಾಗೆ ಹುಟ್ಟಿಕೊಂಡ ಬಯಕೆ ಏನು ಗೊತ್ತಾ?