ಜಕಾರ್ತ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ಸ್ ನಲ್ಲಿ ಭಾರತದ ಪಿವಿ ಸಿಂಧು ತೈಪೇಯ ಝೂ ಯಿಂಗ್ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ವಿಶ್ವ ನಂ.1 ಆಟಗಾರ್ತಿ ಯಿಂಗ್ ವಿರುದ್ಧ ನಂ.3 ಆಟಗಾರ್ತಿ ಸಿಂಧು 13-21, 16-21 ಅಂತರದಿಂದ ಸೋತಿದ್ದಾರೆ. ಮೊದಲ ಸೆಟ್ ನಲ್ಲೇ ಸಿಂಧು ಸೋಲನುಭವಿಸಿ ಯಿಂಗ್ ಹಾದಿಯನ್ನು ಸುಗಮಗೊಳಿಸಿದ್ದರು.
ಇದರೊಂದಿಗೆ ಮತ್ತೆ ಯಿಂಗ್ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗೆಲ್ಲಲು ಸಿಂಧು ಎಡವಿದರು. ಸೈನಾ ಸೆಮಿಫೈನಲ್ ನಲ್ಲಿ ಮಾಡಿದಂತೆಯೇ ಸಿಂಧು ಕೂಡಾ ಫೈನಲ್ ನಲ್ಲಿ ಯಿಂಗ್ ವಿರುದ್ಧ ಕಠಿಣ ಪೈಪೋಟಿ ನೀಡಿದರು. ಆದರೆ ಅದು ಫಲಕೊಡಲಿಲ್ಲ. ಅಂತಿಮವಾಗಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಹಾಗಿದ್ದರೂ ಭಾರತದ ಪಾಲಿಗೆ ಇದು ಐತಿಹಾಸಿಕ ಸಾಧನೆಯೇ ಸರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.