Select Your Language

Notifications

webdunia
webdunia
webdunia
webdunia

ಆರೋಗ್ಯಕರ ಕೋಕಂ ಲಾಭಗಳು

ಆರೋಗ್ಯಕರ ಕೋಕಂ
ಕೋಕಂ ಬಳಸಿ ತಯಾರಿಸಲಾದ ಜ್ಯೂಸ್ ಪೋಷಕಾಂಶಗಳ ಆಗರವಾಗಿದ್ದು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದು ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್ ಮತ್ತು ಪೊಟ್ಯಾಶಿಯಂ, ಮ್ಯಾಂಗನೀಸ್, ಮೆಗ್ನೀಶಿಯಂ ಮೊದಲಾದ ಖನಿಜಗಳನ್ನು ಹೊಂದಿದೆ.
* ಇದರ ಸೇವನೆಯಿಂದ ಡೈಯೇರಿಯಾ ಮತ್ತು ಅತಿಸಾರ ಕಡಿಮೆಯಾಗುತ್ತದೆ
 
* ಇದರಲ್ಲಿ ಆಮ್ಲಗಳು ಜಠರರಸವನ್ನು ಸಮರ್ಪಕ ಆಮ್ಲೀಯತೆಯಲ್ಲಿಡಲು ಸಹಕರಿಸುವುದರಿಂದ ಜೀರ್ಣಕ್ರಿಯೆಯು ಸರಿಯಾಗಿರುತ್ತದೆ
 
* ಇದರ ಸೇವನೆಯಿಂದ ಆಮ್ಲೀಯತೆ ನಿವಾರಣೆಯಾಗುವ ಮೂಲಕ ಚರ್ಮದ ಅಲರ್ಜಿ ಕಡಿಮೆಯಾಗುತ್ತದೆ ಮತ್ತು ಚರ್ಮದ ತುರಿಕೆಯನ್ನು ನಿಲ್ಲಿಸುತ್ತದೆ
 
* ಇದರ ಸೇವನೆಯಿಂದ ರಕ್ತ ಸಂಚಾರ ಸುಸೂತ್ರವಾಗುವಂತೆ ಮಾಡಿ, ಕೆಟ್ಟ ಕೊಲೆಸ್ಟರಾಲ್ ಅಂಶವನ್ನು ಕಡಿಮೆ ಮಾಡುತ್ತದೆ
 
* ಇದರಲ್ಲಿ ಸಂಧಿವಾತ, ಕ್ಯಾನ್ಸರ್, ಮಧುಮೇಹ ಮತ್ತು ಮರುಗುಳಿ ರೋಗವನ್ನು ನಿವಾರಿಸುವ ಶಕ್ತಿ ಇರುತ್ತದೆ
 
* ಇದರಲ್ಲಿರುವ ಹೈಡ್ರೊ ಸಿಟ್ರಿಕ್ ಆಮ್ಲವಿರುವುದರಿಂದ ಇದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ
 
* ಇದರ ಸೇವನೆಯಿಂದ ಬೇಸಿಗೆಯಲ್ಲಿ ದೇಹದಲ್ಲಾಗುವ ನೀರಿನ ಕೊರತೆಯಿಂದ ಉದ್ಭವವಾಗುವ ಹೊಟ್ಟೆಯ ಹುಣ್ಣುಗಳನ್ನು ಕಡಿಮೆ ಮಾಡುತ್ತದೆ
 
* ಇದರ ಸೇವನೆಯಿಂದ ಪಿತ್ತ, ತಲೆ ಬೇನೆ, ತಲೆ ಭಾರ ಶಮನವಾಗುತ್ತದೆ
 
* ಇದರ ಸೇವನೆಯಿಂದ ಒತ್ತಡ ಕಡಿಮೆಯಾಗುತ್ತದೆ
 
* ಇದರ ಸೇವನೆಯಿಂದ ದೇಹದಲ್ಲಿರುವ ವಿಷಯುಕ್ತ ವಸ್ತುಗಳು ಹೊರಹೋಗುತ್ತವೆ
 
* ಇದರ ಸೇವನೆಯಿಂದ ದೇಹದಲ್ಲಿ ರಕ್ತ ಸಂಚಾರ ಸುಸೂತ್ರವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಪೋಟಾ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ...