Select Your Language

Notifications

webdunia
webdunia
webdunia
webdunia

ಇಲ್ಲಿದೆ ನೋಡಿ ಜೀರಿಗೆ ನೀರಿನ 5 ಉಪಯೋಗಗಳು..!!

ಇಲ್ಲಿದೆ ನೋಡಿ ಜೀರಿಗೆ ನೀರಿನ 5 ಉಪಯೋಗಗಳು..!!
ಬೆಂಗಳೂರು , ಸೋಮವಾರ, 20 ಆಗಸ್ಟ್ 2018 (18:40 IST)
ಮನುಷ್ಯ ಬಳಸತೊಡಗಿದ ಅತ್ಯ೦ತ ಹಳೆಯ ಮಸಾಲೆ ವಸ್ತುಗಳಲ್ಲಿ ಜೀರಿಗೆಯೂ ಒಂದು. ಜೀರಿಗೆ ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿದೆ. ಇದು ಕೇವಲ ಅಡುಗೆಗೆ ಸುವಾಸನೆಗೆ ಮಾತ್ರವಲ್ಲ ಇದರಿಂದ ಹಲವಾರು ಆರೋಗ್ಯಕರ ಲಾಭಗಳಿವೆ. ಬನ್ನಿ ಜೀರಿಗೆ ನೀರಿನ 5 ಉಪಯೋಗಗಳನ್ನು ನೋಡೋಣ
* ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಜೀರ್ಣಶಕ್ತಿಯನ್ನು ಹೆಚ್ಚಿಸುವಲ್ಲಿ ಜೀರಿಗೆ ಮಹತ್ವದ ಸ್ಥಾನವನ್ನು ಹೊಂದಿದೆ. ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿರುವ ಜೀರಿಗೆ ನಿಮ್ಮ ಇಮ್ಮ್ಯುನಿಟ್ ಸಿಸ್ಟೆಮ್ ಸರಿಯಾದ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಅಜೀರ್ಣದಿಂದಾಗುವ ಹೊಟ್ಟೆ ನೋವನ್ನು ಸಹ ಇದು ಕಡಿಮೆ ಮಾಡುತ್ತದೆ.
 
* ದೇಹದ ತೂಕವನ್ನು ಇಳಿಸುತ್ತದೆ
ದೇಹದ ತೂಕ ಹೆಚ್ಚಾಗಿದ್ದಲ್ಲಿ ಪ್ರತಿದಿನ ಜೀರಿಗೆ ನೀರಿನ ಸೇವನೆ ಮಾಡಿಬೇಕು. ಜೀರಿಗೆ ದೇಹದಲ್ಲಿ ಮೆಟಾಬಾಲಿಸಂ ಅನ್ನು ಹೆಚ್ಚಿಸಿ. ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಹೆಚ್ಚು ಹೆಚ್ಚು ಕ್ಯಾಲೋರಿಗಳು ಬಳಸಲ್ಪಡುತ್ತವೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಹಸಿವನ್ನು ಕಡಿಮೆಗೊಳಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಲೋಟ ಜೀರಿಗೆ ನೀರನ್ನು ಕುಡಿದರೆ ಆರೋಗ್ಯಕರ ಜೀವನಶೈಲಿ ನಿಮ್ಮದಾಗುವುದರ ಜೊತೆಗೆ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.
 
* ಗರ್ಭಿಣಿಯರಿಗೆ ಒಳ್ಳೆಯದು
ಜೀರಿಗೆ ನೀರಿನಲ್ಲಿರುವ ಗುಣಗಳು ಗರ್ಭಿಣಿಯರಲ್ಲಿನ ಮಲಬದ್ಧತೆ ಸಮಸ್ಯೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವಾಕರಿಕೆ ಮತ್ತು ಮಲಬದ್ಧತೆ ಮುಂತಾದ ಗರ್ಭಾವಸ್ಥೆಯ ಲಕ್ಷಣಗಳನ್ನು ಪರಿಹರಿಸಲು ಜೀರಿಗೆ ಬೀಜಗಳು ಸಹಾಯ ಮಾಡುತ್ತವೆ. ಗರ್ಭಾವಸ್ಥೆಯಲ್ಲಿ ಇದರ ಸೇವನೆ ಮಾಡುವುದರಿಂದ ಗರ್ಭಿಣಿ ಮತ್ತು ಮಗು ಉತ್ತಮ ಆರೋಗ್ಯವನ್ನು ಪಡೆಯಬಹುದು.
 
* ಹೊಳೆಯುವ ಆರೋಗ್ಯಕರ ತ್ವಚೆಗಾಗಿ
1 ಚಮಚ ಜೇನುತುಪ್ಪ ಮತ್ತು 1/2  ಚಮಚ ಜೀರಿಗೆ ಪುಡಿಯನ್ನು ಸೇರಿಸಿ ತಯಾರಿಸಿದ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮತ್ತು ನಯವಾಗಿರುವಂತೆ ಮಾಡುತ್ತದೆ. ಜೇನುತುಪ್ಪ ಊತಿದ ಅಂಗಾಂಶಗಳನ್ನು ಶಮನಗೊಳಿಸುತ್ತದೆ ಮತ್ತು ಜೀರಿಗೆಯು ಚರ್ಮ ಶುಷ್ಕವಾಗುವುದನ್ನು ತಡೆಯುತ್ತದೆ. ಇನ್ನೂ ಪ್ರತಿದಿನ ಬೆಳಿಗ್ಗೆ ಖಾಲಿ ಹೋಟ್ಟೆಯಲ್ಲಿ 1 ಲೋಟ ಜೀರಿಗೆ ನೀರನ್ನು ಕುಡಿದರೆ ಆರೋಗ್ಯಕರ ತ್ವಚೆ ನಿಮ್ಮದಾಗುತ್ತದೆ.
 
* ಆಸ್ತಮಾ ಮತ್ತು ಶೀತವನ್ನು ನಿವಾರಿಸುತ್ತದೆ
ಜೀರಿಗೆಯ ಆಂಟಿಬ್ಯಾಕ್ಟೀರಿಯಾ ಮತ್ತು ಆಂಟಿಇಂಫ್ಲಾಮೇಟರಿ ಗುಣಲಕ್ಷಣಗಳ ಕಾರಣ, ಜೀರಿಗೆ ಬೀಜಗಳು ಶೀತ ಮತ್ತು ಕೆಮ್ಮಿನ ಸಮಸ್ಯೆಗೆ ಅದ್ಭುತ ಮನೆಮದ್ದಾಗಿದೆ. ಇದು ಕೆಮ್ಮು, ಜ್ವರ, ಶೀತವನ್ನು ಬೇಗನೇ ಕಡಿಮೆ ಮಾಡುತ್ತದೆ.
 
ಜೀರಿಗೆ ನೀರು ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿಗಳು - 
2 ಲೋಟ ನೀರು
2 ಚಮಚ ಜೀರಿಗೆ
 
ಮಾಡುವ ವಿಧಾನ - 
2 ಲೋಟ ನೀರಿಗೆ 2 ಚಮಚ ಜೀರಿಗೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರನ್ನು ಸೋಸಿ, ದಿನಕ್ಕೆ 2-3 ಬಾರಿ ಕುಡಿಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ತಲೆಗೂದಲ ಉದುರುವಿಕೆಯನ್ನು ತಡೆಯಲು ಕೆಲವು ನೈಸರ್ಗಿಕ ಔಷಧಗಳು..