Select Your Language

Notifications

webdunia
webdunia
webdunia
webdunia

ಚಿಕನ್ ಪಾಕ್ಸ್ ಅಥವಾ ದಡಾರ ಎರಡೆರಡು ಬಾರಿ ಬರುತ್ತದೆಯೇ?

ಚಿಕನ್ ಪಾಕ್ಸ್ ಅಥವಾ ದಡಾರ ಎರಡೆರಡು ಬಾರಿ ಬರುತ್ತದೆಯೇ?
ಬೆಂಗಳೂರು , ಸೋಮವಾರ, 20 ಆಗಸ್ಟ್ 2018 (09:24 IST)
ಬೆಂಗಳೂರು: ಚಿಕನ್ ಪಾಕ್ಸ್ ಎಂದರೆ ವೈರಾಣುವಿನಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಖಾಯಿಲೆ. ಈ ಖಾಯಿಲೆ ಬಂದರೆ ವ್ಯಕ್ತಿ ಅನುಭವಿಸುವ ಯಾತನೆ ಯಾರಿಗೂ ಬೇಡ. ಹಾಗಿದ್ದರೆ ಈ ಖಾಯಿಲೆ ಒಬ್ಬ ವ್ಯಕ್ತಿಗೆ ಜೀವಮಾನದಲ್ಲಿ ಎರಡೆರಡು ಬಾರಿ ಬರುವ ಸಂಭವವಿದೆಯೇ? ನೋಡೋಣ.
 

ನೀರು, ಗಾಳಿ ಸೋಂಕಿತ ವ್ಯಕ್ತಿಯ ಸ್ಪರ್ಶ, ಬಳಸಿದ ವಸ್ತುಗಳಿಂದಲೂ ಚಿಕನ್ ಪಾಕ್ಸ್ ಹರಡುತ್ತದೆ. ಮೈಯೆಲ್ಲಾ ಗುಳ್ಳೆಗಳೆದ್ದು, ವಿಪರೀತ ತುರಿಕೆ ಜತೆಗೆ ತೀವ್ರ ಜ್ವರ ಈ ರೋಗದ ಲಕ್ಷಣಗಳು. ಸುಮಾರು 15 ದಿನ ಈ ಖಾಯಿಲೆಯಿಂದ ಯಾತನೆ ಅನುಭವಿಸಬೇಕಾಗುತ್ತದೆ.

ಹಾಗಿದ್ದರೆ ಒಬ್ಬ ವ್ಯಕ್ತಿಗೆ ಎಷ್ಟು ಬಾರಿ ಈ ರೋಗ ಬರಬಹುದು? ತಜ್ಞರ ಪ್ರಕಾರ ಚಿಕನ್ ಪಾಕ್ಸ್ ಜೀವನದಲ್ಲಿ ಒಮ್ಮೆ ಮಾತ್ರ ಬರುವಂತದ್ದು. ಒಮ್ಮೆ ಈ ಖಾಯಿಲೆ ಬಂದ ಮೇಲೆ ಅದರ ವೈರಾಣು ದೇಹದಲ್ಲಿ ದುರ್ಬಲವಾಗುತ್ತದೆ. ವಿರಳ ಪ್ರಕರಣಗಳಲ್ಲಿ ಮನುಷ್ಯನ ರೋಗ ನಿರೋಧಕ ಶಕ್ತಿ ತೀರಾ ಕಡಿಮೆಯಿದ್ದರೆ, ವಯಸ್ಸಾದ ಕಾಲದಲ್ಲಿ ಮರುಕಳಿಸಿದದರೂ ಮೊದಲ ಬಾರಿಗೆ ಬಂದಷ್ಟು ತೀವ್ರವಾಗಿ ಈ ಖಾಯಿಲೆ ಯಾತನೆ ಕೊಡದು ಎಂಬುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಸಂಗಾತಿಯು ನಿಮ್ಮ ಜೊತೆ ಪದೇ ಪದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕೆಂದರೆ ಹೀಗೆ ಮಾಡಿ!