Select Your Language

Notifications

webdunia
webdunia
webdunia
webdunia

ನೀವು ವೃದ್ಧಾಪ್ಯದಿಂದ ದೂರವಿರಬೇಕಾ. ಹಾಗಾದರೆ ಅಡುಗೆಗೆ ಈ ಎಣ್ಣೆ ಬಳಸಿ

ನೀವು ವೃದ್ಧಾಪ್ಯದಿಂದ  ದೂರವಿರಬೇಕಾ. ಹಾಗಾದರೆ ಅಡುಗೆಗೆ ಈ ಎಣ್ಣೆ ಬಳಸಿ
ಬೆಂಗಳೂರು , ಭಾನುವಾರ, 19 ಆಗಸ್ಟ್ 2018 (07:20 IST)
ಬೆಂಗಳೂರು : ನೀವು ಅಡುಗೆ ಮಾಡಲು ಬೇರೆ ಬೇರೆ ಅಡುಗೆ ಎಣ್ಣೆಗಳನ್ನು ಬಳಸುತ್ತೀರಾ. ಆದರೆ ಅದರಿಂದ ಆರೋಗ್ಯ ಹಾಳುಮಾಡಿಕೊಳ್ಳುವ ಬದಲು ಇನ್ನು ಮುಂದೆ ಅಡುಗೆಗೆ ಸಾಸಿವೆ ಎಣ್ಣೆ ಬಳಸಿದರೆ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತೆ. ಯಾಕೆ ಎಂಬುದಕ್ಕೆ ವಿವರ ಇಲ್ಲಿದೆ ನೋಡಿ.


1.ಸಾಸಿವೆ ಎಣ್ಣೆ ನಿಮ್ಮ ಹೃದಯಕ್ಕೆ ಅತ್ಯುತ್ತಮ. ದಿನನಿತ್ಯ ಅಡುಗೆಯಲ್ಲಿ ಬಳಸಿ ನಿಮ್ಮ ಹೃದಯಕ್ಕೆ ಸಂಬಂಧಿಸಿದೆ ಕಾಯಿಲೆಗಳು ಬರುವುದಿಲ್ಲ.


2.ಸಂಧಿವಾತ ಮತ್ತು ಸ್ನಾಯು ಸೆಳೆತದ ನೋವನ್ನು ಕಡಿಮೆಗೊಳಿಸುತ್ತದೆ ಮತ್ತು ಇದರ ಜೊತೆ ನಿಮ್ಮ ತೂಕ ಇಳಿಸಲು ಸಹಕಾರಿ.


3.ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ.


4.ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಸಿವೆ ಪುಟ್ಟದಾದರೂ ಇದರಲ್ಲಿರುವ ಖನಿಜಗಳ ಸಂಖ್ಯೆ ದೊಡ್ಡದು.ಕಬ್ಬಿಣ ಮ್ಯಾಂಗನೀಸ್, ತಾಮ್ರ ಮೊದಲಾದ ಖನಿಜಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

5.ಬ್ಯಾಕ್ಟೀರಿಯಾ ನಿವಾರಕ: ಸಾಸಿವೆ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ದೇಹಕ್ಕೆ ಮಾರಕವಾದ ಬಹಳಷ್ಟು
ಬ್ಯಾಕ್ಟೀರಿಯಾಗಳನ್ನು ತೊಗಿಸುತ್ತದೆ. ವಿಶೇಷವಾಗಿ ಹೊಟ್ಟೆ, ಮೂತ್ರಕೋಶ, ಮೂತ್ರನಾಳಗಳಲ್ಲಿ ಸೋಂಕು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.

6.ವೃದ್ಧಾಪ್ಯವನ್ನು ದೂರವಿಡುತ್ತದೆ: ಸಾಸಿವೆ ಕಾಳಿನಲ್ಲಿ ಕ್ಯಾರೋಟಿನ್, ಝಿಯಾಕ್ಸಾಥಿನ್ ಎ,ಸಿ ಮತ್ತು ಕೆ ಹೇರಳವಾಗಿವೆ. ಇದರಿಂದ ವೃದ್ಧಾಪ್ಯವನ್ನು ದೂರವಿರಿಸುತ್ತದೆ.ಸಾಸಿವೆ ಎಣ್ಣೆಯ ಮಸಾಜ್ ಸಾಧ್ಯವಾಗದಿದ್ದರೆ ಒಂದು ಬಟ್ಟೆಯಲ್ಲಿ ಸಾಸಿವೆ ಕಾಳುಗಳನ್ನು ಹಾಕಿ ಜಜ್ಜಿ ಸ್ನಾನ ಮಾಡುವ ನೀರಿನಲ್ಲಿ ಮುಳುಗಿಸಿ ಆ ನೀರಿನಲ್ಲಿ ಸ್ನಾನ ಮಾಡುವುದರಿಂದಲೂ ಉತ್ತಮ ಫಲಿತಾಂಶ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರುಚಿ ರುಚಿಯಾದ ವೆಜ್ ಕಟ್ಲೆಟ್