Select Your Language

Notifications

webdunia
webdunia
webdunia
webdunia

ಬಾಯಿ ನೀರೂರಿಸುವ ಗೋಳಿಬಜ್ಜಿ

ಬಾಯಿ ನೀರೂರಿಸುವ ಗೋಳಿಬಜ್ಜಿ
ಬೆಂಗಳೂರು , ಶುಕ್ರವಾರ, 31 ಆಗಸ್ಟ್ 2018 (14:16 IST)
ಮಳೆಗಾಲದಲ್ಲಿ ಟೀ ಕುಡಿಯುವ ಸಮಯದಲ್ಲಿ ಬಜ್ಜಿಗಳಿದ್ದರೆ ಅದರ ಮಜವೇ ಬೇರೆ ಅದರಲ್ಲೂ ಮಂಗಳೂರು ಬಜ್ಜಿ ಇದ್ದರಂತೂ ಮುಗಿದೇ ಹೋಯಿತು, ಬಿಸಿ ಬಿಸಿಯಾದ ಬಜ್ಜಿಯನ್ನು ಚಟ್ನಿಯೊಂದಿಗೆ ಬೆರೆಸಿ ತಿಂದರೆ ತಿನ್ನುತ್ತಲೇ ಇರಬೇಕು ಎಂದು ಮನಸಾಗುತ್ತದೆ. ನಿಮಗೂ ಈ ಬಜ್ಜಿ ಮಾಡಿ ತಿನ್ನಬೇಕು ಎಂಬ ಮನಸ್ಸಾಗಿದ್ದರೆ ಇಲ್ಲಿದೆ ವಿವರ.

ಬೇಕಾಗಿರುವ ಸಾಮಗ್ರಿಗಳು:
 
1 ಕಪ್ ಮೈದಾ ಹಿಟ್ಟು
2 ಟೀ ಸ್ಪೂನ್ ಅಕ್ಕಿ ಹಿಟ್ಟು
1 ಟೀ ಸ್ಪೂನ್ ಉದ್ದಿನ ಹಿಟ್ಟು 
ಮೊಸರು ಅರ್ಧ ಕಪ್
ಹಸಿಮೆಣಸಿನ ಕಾಯಿ 2-3
1 ಟೀ ಸ್ಪೂನ್ ಶುಂಟಿ ಪೇಸ್ಟ್
ಕರಿಬೇವು ಸ್ವಲ್ಪ
ಸಣ್ಣದಾಗಿ ಕಟ್ ಮಾಡಿದ ತೆಂಗಿನ ಚೂರುಗಳು
1 ಚಮಚ ಜೀರಿಗೆ
ಅಡುಗೆ ಸೋಡಾ 2 ರಿಂದ 3 ಚಿಟಿಕೆ
ರುಚಿಗೆ ತಕ್ಕಷ್ಟು ಉಪ್ಪು
ಸಕ್ಕರೆ 1 ಚಮಚ
ಸಣ್ಣದಾಗಿ ಕತ್ತರಿಸಿದ ಈರುಳ್ಳಿ
ಎಣ್ಣೆ
 
ಮಾಡುವ ವಿಧಾನ -
 
ಮೊದಲು ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಅಕ್ಕಿಹಿಟ್ಟು, ಉದ್ದಿನಹಿಟ್ಟು, ಹಸಿಮೆಣಸಿನಕಾಯಿ, ಈರುಳ್ಳಿ, ಶುಂಟಿ, ಕರಿಬೇವು, ತೆಂಗಿನ ಚೂರುಗಳು, ಜೀರಿಗೆ, ಸೋಡಾ, ಸಕ್ಕರೆ ಅನ್ನು ಹಾಕಿ ನಂತರ ಅದಕ್ಕೆ ತಾಜಾ ಮೊಸರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಗಟ್ಟಿಯಾಗಿ ಕಲೆಸಿ, ಅದು ಹೆಚ್ಚು ನೀರಾಗಿರಬಾರದು ಮತ್ತು ಬಹಳ ಗಟ್ಟಿಯಾಗಿರಬಾರದು ನಂತರ ಅದನ್ನು ಒಂದು ಕವರ್ ಇಲ್ಲವೇ ಪಾತ್ರೆಯಲ್ಲಿ ಹಾಕಿ ಅರ್ಧಗಂಟೆಯಿಂದ ಒಂದು ಗಂಟೆಯವರೆಗೆ ಅರಳಲು ಬಿಡಿ.
 
ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಚೆನ್ನಾಗಿ ಬಿಸಿಯಾದ ಮೇಲೆ ಅದಕ್ಕೆ ಕಲಿಸಿದ ಹಿಟ್ಟನ್ನು ಉಂಡೆಯ ರೀತಿಯಲ್ಲಿ ಮಾಡಿಕೊಂಡು ಎಣ್ಣೆಯಲ್ಲಿ ಬಿಡಿ. ಅದು ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿದು ಎಣ್ಣೆಯಿಂದ ಹೊರ ತೆಗೆದರೆ ರುಚಿಯಾದ ಗೋಳಿಬಜ್ಜಿ ತಿನ್ನಲು ಸಿದ್ಧ.
 
ಗೋಳಿಬಜ್ಜಿಯು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ರೊಮ್ಯಾನ್ಸ್ ಗೆ ಒಲ್ಲೆನೆನ್ನುವುದಕ್ಕೆ ಇದೂ ಕಾರಣವಿರಬಹುದು