Select Your Language

Notifications

webdunia
webdunia
webdunia
webdunia

ಮಹಿಳೆಯ ಮೇಲೆ ಪತಿ ಸೇರಿದಂತೆ ಐವರಿಂದ ಅತ್ಯಾಚಾರ

ಮಹಿಳೆಯ ಮೇಲೆ ಪತಿ ಸೇರಿದಂತೆ ಐವರಿಂದ ಅತ್ಯಾಚಾರ
ಉತ್ತರಪ್ರದೇಶ , ಸೋಮವಾರ, 3 ಸೆಪ್ಟಂಬರ್ 2018 (12:01 IST)
ಉತ್ತರ ಪ್ರದೇಶ : ನಿಖಾ ಹಲಾಲ್ ಎಂಬ ಅನಿಷ್ಟ ಪದ್ಧತಿಯೊಂದರ ನೆಪದಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ  ಪತಿ ಹಾಗೂ ಪತಿಯ ತಂದೆ ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.


ನಿಖಾ ಹಲಾಲ್ ಎಂದರೆ ವಿಚ್ಛೇದಿತ ಪತ್ನಿಯನ್ನು ಪತಿ ಮರು ವಿವಾಹವಾಗ ಬಯಸಿದರೆ ಆಕೆ ಇನ್ನೊಬ್ಬನ ಜೊತೆ ಸಂಸಾರ ನಡೆಸಿ ಬರಬೇಕು. ಆದಕಾರಣ ಆತ ತಾನು ಮದುವೆಯಾಗಲು ಆಕೆಗೆ ತನ್ನ ಕುಟುಂಬದ ಇತರೆ ಸದಸ್ಯರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಹೇಳಿದ್ದ. ಇದಕ್ಕೆ ಆಕೆ ಒಪ್ಪದಿದ್ದಾಗ ಪತಿಯೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯ ಮಾವ ಹಾಗೂ ಇತರೆ ಐವರು ಕೂಡ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ.


ಈ ಘಟನೆಗೆ  ಸಂಬಂಧಿಸಿದಂತೆ ನೊಂದ ಮಹಿಳೆ ಪತಿ, ಮಾವ ಹಾಗೂ ಸಂಬಂಧಿಗಳ ವಿರುದ್ಧ ದೂರು ನೀಡಿದ ಹಿನ್ನಲೆಯಲ್ಲಿ ಇದೀಗ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಾಖಲೆ ಏರಿಕೆ