Publish Date: Wed, 05 Sep 2018 (17:16 IST)
Updated Date: Wed, 05 Sep 2018 (17:20 IST)
ತಾಯಿಯೋರ್ವಳು ಮಗಳಿಗೆ ಮನಬಂದಂತೆ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರವಾರ ನಗರದ ಪಿಂಗೆ ರಸ್ತೆಯಲ್ಲಿನ ರೇಣುಕಾ ಎನ್ನುವ ಮಹಿಳೆಯೇ ಹಲ್ಲೆ ಮಾಡಿದ ಮಹಿಳೆಯಾಗಿದ್ದಾಳೆ. ತನ್ನ 12 ವರ್ಷದ ಐಶ್ವರ್ಯ ಎನ್ನುವ ಮಗಳ ಮೇಲೆ ಕಳೆದ ಎರಡು ದಿನದ ಹಿಂದೆ ರಾತ್ರಿ ವೇಳೆ ರೇಣುಕಾ ಹಲ್ಲೆ ಮಾಡಿದ್ದಾಳೆ. ಇನ್ನು ಹಲ್ಲೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪಕ್ಕದ ಮನೆಯವರು ಮಾಡಿ ಹರಿಬಿಟ್ಟಿದ್ದು ಸಾಕಷ್ಟು ಗಮನ ಸೆಳೆದಿದೆ. ಇನ್ನು ಈ ಬಗ್ಗೆ ಹೇಳಿಕೆ ನೀಡಿದ ರೇಣುಕಾ, ತಾನು ಬಾಡಿಗೆ ಮನೆಯಲ್ಲಿ ಇದ್ದು ಮನೆ ಮಾಲಿಕರು ಎರಡು ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ.
ಬಿಡು ಎಂದು ಹೇಳುತ್ತಿದ್ದಾರೆ. ಅಲ್ಲದೇ ನನ್ನ ಮಗಳು ಕದ್ದಿದ್ದಾಳೆ ಎಂದು ಹೇಳಿದ್ದರಿಂದ ಸಿಟ್ಟಾಗಿ ಹೊಡೆದಿದ್ದು ನನ್ನದು ತಪ್ಪಾಗಿದೆ ಎಂದಿದ್ದಾಳೆ. ಇನ್ನು ರೇಣುಕಾ ಪತಿಯನ್ನ ಬಿಟ್ಟಿದ್ದು ಈ ಹಿಂದಿನಿಂದ ಮಕ್ಕಳ ಮೇಲೆ ಹಲ್ಲೆ ಮಾಡುತ್ತಾಳೆ ಎನ್ನುವ ದೂರನ್ನ ಸ್ಥಳೀಯರು ಹೇಳಿದ್ದಾರೆ. ಮಗಳು ಸದ್ಯ ಮನೆಯಲ್ಲಿಯೇ ಇದ್ದಾಳೆ.
ಘಟನೆ ಸಂಬಂಧ ಕಾರವಾರ ನಗರ ಠಾಣಾ ಪೊಲೀಸರು ಮಹಿಳೆಯ ಮನೆಗೆ ಭೇಟಿ ನೀಡಿ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಇನ್ನೊಂದೆಡೆ ತನ್ನದು ತಪ್ಪಿಲ್ಲ ತಾನು ನನ್ನ ಮಗಳಿಗೆ ಹೊಡೆದಿದ್ದೇನೆ ಎಂದು ಹೊಡೆದಿರುವುದಕ್ಕೆ ಮಹಿಳೆ ಸಮರ್ಥಿಸಿಕೊಂಡಿದ್ದಾಳೆ.